Header Ads
Breaking News

ಉಡುಪಿ ಜಿಲ್ಲೆಯಲ್ಲಿ ಟೈಗರ್ ಟಾಯ್ಲೆಟ್ ಯೋಜನೆ: ಸ್ವಚ್ಚ ಭಾರತ್ ಕನಸು ನನಸು ಮಾಡುತ್ತಿರುವ ಉಡುಪಿ

ಟಾಯ್ಲೆಟ್ ಅಂದ ತಕ್ಷಣ ಮೂಗುಮುರಿಯಬೇಡಿ. ಬಾಲಿವುಡ್ ನಲ್ಲಿ ಬಂದ ’ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಸಿನಿಮಾ ನೋಡಿಲ್ವಾ ..ಅದೇ ಥರ ನಾವೀಗ ನಿಮಗೊಂದು ಟಾಯ್ಲೆಟ್ ಸ್ಟೋರಿ ತೋರಿಸ್ತೀವಿ. ಇದು ಅತಿಂಥಾ ಟಾಯ್ಲೆಟ್ ಅಲ್ಲ, ಇದರ ಹೆಸ್ರು ಟೈಗರ್ ಟಾಯ್ಲಟ್! ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿನ್ ನ ಕನಸು ನನಸು ಮಾಡ ಹೊರಟ ಕಥೆ ಇದು.

 ಖಡ್ಡಾಯವಾಗಿ ಶೌಚಾಲಯವನ್ನೇ ಬಳಸಬೇಕು ಅನ್ನುತ್ತೆ ಕಾನೂನು. ಬಯಲು ಶೌಚ ಮುಕ್ತ ಭಾರತ ಮಾಡೋದು ಸುಲಭದ ಮಾತಲ್ಲ. ಜನಾಕ?ಣೆಗೆ ಪಾತ್ರವಾಗುವ ರೀತಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರೋದು ಕೂಡಾ ಒಂದು ಸವಾಲು. ಈ ಸವಾಲು ಎದುರಿಸೋದು ಹೇಗೆ ಎಂದು ಪ್ಲಾನ್ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಉಡುಪಿ ಜಿಲ್ಲೆಯನ್ನು ತನ್ನ ಪ್ರಯೋಗಕ್ಕೆ ಬಳಸಿಕೊಂಡಿದೆ. ’ಟೈಗರ್ ಟಾಯ್ಲೆಟ್’ ಎಂಬ ಹೊಚ್ಚ ಹೊಸ ಯೋಜನೆಯೊಂದು ಪ್ರಾಯೋಗಿಕವಾಗಿ ಉಡುಪಿಯಲ್ಲಿ ಯಶಸ್ವಿಯಾಗಿದೆ. ಬೆಳೆಯುತ್ತಿರುವ ನಗರಗಳಲ್ಲಿ ಶೌಚಾಲಯ ಕಟ್ಟೋಕೆ ಭೂಮಿಯದ್ದೇ ಸಮಸ್ಯೆ, ಅಂತರ್ಜಲ ಹಾನಿ ಆಗದಂತೆ, ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಟಾಯ್ಲೆಟ್ ಕಟ್ಟೋದು ಕ. ಆದರೆ ಈ ಟೈಗರ್ ಟಾಯ್ಕೆಟ್ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ, ನಾಲ್ಕು ಅಡಿ ಜಾಗ ಇದ್ರೆ ಸಾಕು, ವಿಸರ್ಜಿತ ಮಲ ಭೂಮಿಗೆ ಸೇರದಂತೆ ಸ್ವಚ್ಛವಾದ ರೀತಿಯಲ್ಲಿ ನಿರ್ವಹಿಸಬಹುದು. ಉಡುಪಿ ಜಿಲ್ಲೆಯಲ್ಲಿ ಇಂತಹಾ ನೂರು ’ಟೈಗರ್ ಟಾಯ್ಲೆಟ್’ ಯಶಸ್ಸು ಕಂಡಿದೆ.

ಟೈಗರ್ ಟಾಯ್ಲೆಟ್ ಅಂದ್ರೆ ಏನಪ್ಪಾ ಅಂತ ನೀವು ಕೇಳ್ಬೋದು. ಈಗಾಗಲೇ ಇರುವ ಟಾಯ್ಲೆಟ್ ನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ಗುಂಡಿಗೆ ಜೋಡಿಸುವ ಅಪರೂಪದ ರಚನೆ ಇದು. ನಾಲ್ಕಡಿಯ ಹೊಂಡ ತೋಡಿದ್ರೆ ಸಾಕು. ತಳಭಾಗಕ್ಕೆ ವಿವಿಧ ಗಾತ್ರದ ಜಲ್ಲಿ ಮತ್ತು ಮರಳು ಹಾಕಿ ಫಿಲ್ಟರ್ ಬೆಡ್ ಮಾಡಲಾಗುತ್ತೆ. ಅದರ ಮೇಲ್ಭಾಗದಲ್ಲಿ ಎರೆಹುಳು ಪ್ರಬೇಧಕ್ಕೆ ಸೇರಿದ ’ಟೈಗರ್ ಹುಳು’ ಗಳನ್ನು ಬಿಡಲಾಗುತ್ತೆ. ಈ ಹುಳುಗಳು ಮಲವನ್ನು ಸೇವಿಸಿ ಗೊಬ್ಬರವಾಗಿ ಪರಿವರ್ತಿಸುತ್ತೆ. ತಳಭಾಗದಲ್ಲಿ ಸೋಸಲ್ಪಟ್ಟ ನೀರು ಶುದ್ಧವಾಗಿ ಭೂಮಿ ಸೇರುತ್ತೆ. ಮನೆ ಕಟ್ಟಿ ಹತ್ತಾರು ವ?ಗಳ ನಂತ್ರ ಟಾಯ್ಲೆಟ್ ಗುಂಡಿ ಭರ್ತಿಯಾಗುವ ಸಮಸ್ಯೆ ಮಾಮೂಲು. ಆದ್ರೆ ಟೈಗರ್ ಟಾಯ್ಲೆಟ್ ನಲ್ಲಿ ಈ ಸಮಸ್ಯೆ ಇರಲ್ಲ. ಹುಳುಗಳು ಉತ್ಪಾದಿಸಿದ ಗೊಬ್ಬರವನ್ನು ಕಾಲಕಾಲಕ್ಕೆ ತೆರವು ಮಾಡಿದ್ರೆ ಮುಗೀತು. ಅಂತರ್ಜಲಕ್ಕೆ ಹಾನಿಯೂ ಇಲ್ಲ.

ಪ್ರಜ್ಞಾವಂತರೇ ಹೆಚ್ಚಿರುವ ಉಡುಪಿ ಜಿಲೆಯನ್ನು ಮೊದಲಾಗಿ ಕೇಂದ್ರ ಸರ್ಕಾರ ಪ್ರಾಯೋಗಿಕವಾಗಿ ಆಯ್ದುಕೊಂಡಿದೆ. ಸರ್ಕಾರದ ಖರ್ಚಿನಲ್ಲೇ ನೂರು ಶೌಚಾಲಯ ಯಶಸ್ವಿಯಾಗಿ ಪೂರೈಸಲಾಗಿದೆ. ಜನರ ಪ್ರತಿಕ್ರಿಯೆಯೂ ಚೆನ್ನಾಗಿದೆ. ಮಲ ತುಂಬಿದ ಗುಂಡಿಗಳನ್ನು ಸ್ವಚ್ಛ ಮಾಡುವುದು, ಪರೋಕ್ಷವಾಗಿ ಮಲ ಹೊರುವ ಪದ್ದತಿಗೂ ಕಾರಣವಾಗುತ್ತೆ. ದೇಶದಲ್ಲೇ ಮೊದಲ ಬಾರಿಗೆ ಮಲ ಹೊರುವ ಪದ್ದತಿಯನ್ನು ರದ್ದು ಮಾಡಿದ ಉಡುಪಿ ಜಿಲ್ಲೆ ಈಗ ’ಟೈಗರ್ ಟಾಯ್ಲೆಟ್’ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ.

 

Related posts

Leave a Reply

Your email address will not be published. Required fields are marked *