Header Ads
Header Ads
Header Ads
Header Ads
Header Ads
Header Ads
Breaking News

ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆ : ಮಟಪಾಡಿಯಿಂದ ರಾಮನಕುದ್ರು ಮತ್ತು ನಂದನ ಕುದ್ರುಗೆ ಸಂಪರ್ಕ ಕಡಿತ

 ಬೆಂಬಿಡದೆ ಸುರಿಯುತ್ತಿರುವ ಮಳೆ ಯಿಂದಾಗಿ ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ ,ಮಟಪಾಡಿಯಿಂದ ರಾಮನ ಕುದ್ರು ಮತ್ತು ನಂದನ ಕುದ್ರುಗೆ ಸಂಪರ್ಕ ಮಾಡುವ ರಸ್ತೆಯು ಜಲಾವ್ರತಗೊಂಡಿದ್ದು ಕುದ್ರುವಿನ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ.ರಸ್ತೆಯ ಮೇಲೆ ನೀರು ವೇಗವಾಗಿ ಹರಿಯುವಾಗ ಪಾದಾಚಾರಿಗಳು ಅಷ್ಟೆ ಅಲ್ಲದೆ ವಾಹನ ಸವಾರರು ಕಷ್ಟಪಟ್ಟು ತಮ್ಮ ಮನೆಗೆ ಸೇರಲು ಹರಸಾಹಸ ಪಡುತಿದ್ದ ದ್ರಶ್ಯ ಕಂಡು ಬಂದಿತ್ತು.ಮಟಪಾಡಿ ಗ್ರಾಮದಲ್ಲಿ ಹಲವಾರು ಕೃಷಿ ಭೂಮಿಗಳು ಮಳೆಯಿಂದಾಗಿ ನೀರುತುಂಬಿಕೊಂಡು ನದಿಯಂತೆ ಕಂಡು ಬರುತ್ತಿದ್ದವು.ನೀರಿನ ಹರಿವಿನ ತೀವೃತೆಯಿಂದಾಗಿ ಪಾದಾಚಾರಿಗಳು ಒಬ್ಬರು ಮತ್ತೊಬ್ಬರ ಕೈಹಿಡಿದು ನಡೆಯುತ್ತಿದ್ದ ದೃಶ್ಯವು ಕ್ಯಾಮಾರದಲ್ಲಿ ಸೆರೆಯಾಗಿದ್ದದು ನೋಡಿದರೆ ಮಳೆಯಿಂದಾದ ಅವಾಂತರವನ್ನು ಕಾಣಬಹುದು.ಸುಮಾರು ನೂರಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದಲ್ಲಿ ತೋಟಗಳು ಸೇರಿದಂತೆ ಮನೆಯ ಸುತ್ತಮುತ್ತವೂ ನೀರು ತುಂಬಿಕೊಡಿದ್ದವು.ಒಟ್ಟಾರೆ ಈ ಬಾರಿಯ ಮಳೆಯಿಂದಾಗಿ ಹಲವಾರು ಅವಘಡಗಳು ಕಂಡು ಬಂದಿದ್ದು ಜನ ಜೀವನ ಅಸ್ತವ್ಯಸ್ತವಾಗಿತ್ತು. ಕಷ್ಟನಷ್ಟ ಸಂಭವಿಸಿದೆ.

Related posts

Leave a Reply

Your email address will not be published. Required fields are marked *