Header Ads
Header Ads
Header Ads
Header Ads
Header Ads
Header Ads
Breaking News

ಉಡುಪಿ ಜಿಲ್ಲೆಯ ಪರ್ಕಳ ದೇವಸ್ಥಾನದಲ್ಲಿ ಕೆರೆಯಲ್ಲಿ ಪತ್ತೆಯಾದ 400ವರ್ಷ ಹಳೆಯ ಗಣಪನ ವಿಗ್ರಹ

ಉಡುಪಿ ಜಿಲ್ಲೆಯ ಪರ್ಕಳ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅಭಿವೃದ್ದಿಗೊಳ್ಳುತ್ತಿರುವ ಕೆರೆಯಲ್ಲಿ ಗಣಪನ ಮೂರ್ತಿ ಪತ್ತೆಯಾಗಿದೆ.
ಈ ಹಿಂದೆ ಸಚಿವ ಪ್ರಮೋದ್ ಮಧ್ವರಾಜ್ ಅವರ ಅನುದಾನದಿಂದ ಸುಮಾರು ಅಂದಾಜು 1. ಕೋಟಿ. ರೂ ವೆಚ್ಚ ದಿಂದ ದೇವಸ್ತಾನದಅಭಿವೃದ್ದಿ ಗೊಳ್ಳುವ ಸಮಯದಲ್ಲಿ ಕೆರೆಯಮಣ್ಣುನ್ನು ಜೆ.ಸಿ. ಬಿ.ಮೂಲಕ ಮಣ್ಣನ್ನು ಮೇಲಕ್ಕೆ ಹಾಕಿ ವರ್ಷ ಒಂದು ಕಳೆದರೂ ಮಣ್ಣಿನಲ್ಲಿ ಹುದುಗಿ ಹೋದ ಗಣಪ ಮತ್ತೆ ಮಣ್ಣನ್ನು ಕೆರೆಗೆ ತುಂಬಿಸಲು ಜೆ.ಸಿ.ಬಿ ಬಳಸುವಾಗ ಈ ಕರಿ ಕಲ್ಲು ಗಣಪನ ವಿಗ್ರಹ ಪತ್ತೆಯಾಗಿದೆ. ಸುಮಾರು ಎರಡು ಕಾಲು ಫೀಟು ಪ್ರಾಣಿ ಪೀಠ ಸೇರಿ ಉದ್ದ ವಿರುವ ಹಾಗೂ ಒಂದು ಕಾಲ್ ಫೀಟು ಅಗಲವಿದೆ. ಅರ್ಚಕ ಉಪೇಂದ್ರ ಬಾಯಿರಿ ಹಾಗೂ ಅವರ ಪುತ್ರ ಆ ವಿಗ್ರಹವನ್ನು ಸ್ವಚ್ಛ ಗೊಳಿಸಿದರು. ಅಂದಾಜು 400ವರ್ಷ ಹಳೆಯದಾಗಿರಬಹುದೆಂದು ಉಪೇಂದ್ರ ಬಾಯಿರಿ ತಿಳಿಸಿದ್ದಾರೆ. ಗಣಪತಿಯ ಹಣೆಯಭಾಗ ಸ್ವಲ್ಪ ಪೆಟ್ಟಾಗಿದೆ ಎಂದು ಗಣೇಶ ರಾಜ್ ಸರಳಬೆಟ್ಟು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *