Header Ads
Header Ads
Breaking News

ಉಡುಪಿ-ವಿಶಿಷ್ಠ ರೀತಿಯಲ್ಲಿ ಪ್ರೇಮಿಗಳ ದಿನ:ಪ್ರೇಮಿಗಳ ದಿನದ ಬದಲು ನಿರ್ಗತಿಕರ ದಿನ ಆಚರಣೆ

ಉಡುಪಿಯಲ್ಲಿ ಪ್ರೇಮಿಗಳ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ನಿರ್ಗತಿಕರ, ಅಶಕ್ತರ ಆರೈಕೆ ಮಾಡುವ ಮೂಲಕ ಪ್ರೇಮಿಗಳ ದಿನದ ಬದಲು ನಿರ್ಗತಿಕರ ದಿನವನ್ನು ಆಚರಿಸುವ ಮೂಲಕ ಗಮನ ಸೆಳೆಯಿತು. ಈ ವೇಳೆ ಕರವೇ ಜಿಲ್ಲಾ ಘಟಕದ ವತಿಯಿಂದ ಅಶಕ್ತರ ಸೇವೆ ನಡೆಯಿತು.ನಿರ್ಗತಿಕರ ಗಡ್ಡ ,ಕೂದಲು ಕತ್ತರಿಸಿ ಶುಚಿಗೊಳಿಸಿದ ಕರವೇ ಕಾರ್ಯಕರ್ತರು ಅವರ ಮೊಗದಲ್ಲಿ ಮಂದಹಾಸಕ್ಕೆ ಕಾರಣರಾದ್ರು.ಇವತ್ತು ಸಂಜೆತನಕ ನಿರ್ಗತಿಕರ ಸೇವೆ ಜೊತೆಗೆಅಶಕ್ತರೊಂದಿಗೆ ಸಹಭೋಜನವೂ ನಡೆಯಲಿದೆ. ಉಡುಪಿಯ ಬೀಡಿನಗುಡ್ಡೆಯಲ್ಲಿರುವ ವಸತಿರಹಿತರ ಆಶ್ರಯತಾಣದಲ್ಲಿ ಕರವೇ ಈ ವಿನೂತನ ಸಮಾಜಸೇವೆ ಹಮ್ಮಿಕೊಂಡಿತ್ತು.

Related posts

Leave a Reply