Header Ads
Breaking News

ಉಡುಪಿ ಸಮಾಜಸೇವಕರಿಂದ ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರ

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಹಾಗೂ ರಾಮದಾಸ್ ಪಾಲನ್ ಅವರು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಸೋಮವಾರ ಅಂತಿಮ ಗೌರವಗಳೊಂದಿಗೆ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ ಸಮಕ್ಷಮದಲ್ಲಿ ನಡೆಸಿದರು.

ಶೇಖರ (50ವ), ರಮೇಶ (45 ವ), ರಾಜು (70 ವ ), ವೀರಭದ್ರ (70ವ) ಹೆಸರಿನ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನಾಲ್ವರು ಮೃತಪಟ್ಟಿದ್ದರು. ವಾರಸುದಾರರ ಬರುವಿಕೆಗಾಗಿ ಅವರೆಲ್ಲರ ಶವಗಳನ್ನು ಆಸ್ಪತ್ರೆಯ ಶೀತಲಿಕೃತ ಶವಗಾರದಲ್ಲಿ ರಕ್ಷಿಸಿ ಇಡಲಾಗಿತ್ತು. ವಾರಸುದಾರರು ಸಂಪರ್ಕಿಸುವಂತೆ ಮಾಧ್ಯಮಗಳಲ್ಲಿ ಪ್ರಕಟಣೆಯನ್ನು ನೀಡಲಾಗಿತ್ತು. ಕಾಯುವಿಕೆಯ ಕಾಲಮಿತಿ ಕಳೆದರೂ ಸಂಬಂಧಪಟ್ಟವರು ಸಂಪರ್ಕಿಸದೆ ಇರುವುದರಿಂದ ಅಂತ್ಯಸಂಸ್ಕಾರ ನಡೆಸಲಾಯಿತು. ಶವಸಂಸ್ಕಾರ ನಡೆಸಲು ವಿಷ್ಣು ಪ್ಲವರ್ ಸ್ಟಾಲ್ ಇದರ ಮಾಲಿಕರು ಹೂವುಗಳನ್ನು ಉಚಿತವಾಗಿ ಒದಗಿಸಿದರು. ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ ಆರ್ಥಿಕ ನೆರವು ನೀಡಿದರು. ಸಾಜಿ ಅಜ್ಛರಕಾಡು, ಮತ್ತು ತಾಯಿರ್ ಸಹಕರಿಸಿದರು.

Related posts

Leave a Reply

Your email address will not be published. Required fields are marked *