Header Ads
Header Ads
Header Ads
Breaking News

ಉದ್ಯಮಿ ಪ್ರಕಾಶ್ ಶೆಟ್ಟಿಯವರ 60ನೇ ಹುಟ್ಟುಹಬ್ಬದ ಪ್ರಯುಕ್ತ ಡಿ.25ರಂದು ’ಪ್ರಕಾಶಾಭಿನಂದನ’ ವಿಶೇಷ ಕಾರ್ಯಕ್ರಮ

ಪ್ರಕಾಶ್ ಶೆಟ್ಟಿ ಅಭಿನಂದನಾ ಸಮಿತಿಯ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಶಸ್ವಿ ಉದ್ಯಮಿ ಪ್ರಕಾಶ್ ಶೆಟ್ಟಿಯವರ 60ನೇ ಹುಟ್ಟುಹಬ್ಬದ ಪ್ರಯುಕ್ತ ಪ್ರಕಾಶಾಭಿನಂದನ ವಿಶೇಷ ಕಾರ್ಯಕ್ರಮವು ಡಿ.25ರಂದು ನಗರದ ಗೋಲ್ಡ್‌ಫಿಂಚ್‌ನಲ್ಲಿ ನಡೆಯಲಿದೆ ಎಂದು ಪ್ರಕಾಶ್ ಶೆಟ್ಟಿ ಅಭಿನಂದಾ ಸಮಿತಿಯ ಅದ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಹೇಳಿದ್ರು. ಅವರು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ೬೦ವರ್ಷ ಪ್ರತಿಯೊಬ್ಬರಿಗೂ ಆಗುತ್ತೆ. ಆದ್ರೆ ಪ್ರಕಾಶ್ ಶೆಟ್ಟಿವರ ಸಾಧನೆ ಅಪಾರ. ಅವರು ಸಮಾಜಕ್ಕೆ ನೀಡಿದ ಕೊಡಗೆಗಳು ಕೂಡಾ ಅಷ್ಟಿಷ್ಟಲ್ಲ. ಆ ದೃಷ್ಟಿಯಿಂದ ಪ್ರಕಾಶಾಭಿನಂದನ ಕಾರ್ಯಕ್ರಮವವನ್ನು ಆಯೋಜಿಸಿದ್ದೇವೆ ಎಂದು ಮಾಹಿತಿ ನೀಡಿದ್ರು.

ಬಳಿಕ ಪ್ರದಾನ ಚಂಚಾಲಕರಾದ ಸಂತೋಷ್ ವಿ ಶೆಟ್ಟಿ ಪೂನೆ ಮಾತನಾಡಿ, ಪ್ರಕಾಶ್ ಅವರು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡ್ತಾ ಇದ್ದಾರೆ. ಅವರ ಸಾಧನೆ ಕೂಡಾ ಅಪಾರ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು. ಇನ್ನು ವಿಶ್ವ ಬಂಟ್ಸ್ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಪ್ರಕಾಶ್ ಶೆಟ್ಟಿಯವರು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಕಲಿಯುವ ಮಕ್ಕಳಿಗೂ ಕೂಡಾ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರು ಸಮಾಜಕ್ಕೆ ಒಂದು ಶಕ್ತಿ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು.

ಈ ಸಂದರ್ಭ ಪ್ರದಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಡುಬಿದ್ರೆ, ಸಂಚಾಲಕರಾದ ಸುರೇಶ್ಚಂದ್ರ ಶೆಟ್ಟಿ, ಮನೋಹರ್ ಎಸ್ ಶೆಟ್ಟಿ, ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ ಶೆಟ್ಟಿ, ಸುಧೀರ್ ಹೆಗ್ಡೆ ಬೈಲೂರು, ಶಿವಾನಂದ್ ಎಂ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಗೋವಿಂದ ಪೂಜಾ ಮುಲ್ಕಿ, ರವಿರಾಜ್ ಶೆಟ್ಟಿ ಹಾಗೂ ಮತ್ತಿರತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *