Header Ads
Header Ads
Header Ads
Breaking News

ಉದ್ಯಾವರದಲ್ಲಿ ಗಮನ ಸೆಳೆದ ಮದ್ರಸ ವಿದ್ಯಾರ್ಥಿಗಳ ಎಕ್ಸ್‌ಪೋ : ಉದ್ಯಾವರ ಜಮಾಹತ್ ಮಹಲ್ ಕಮಿಟಿಯಿಂದ ಆಯೋಜನೆ

ಮಂಜೇಶ್ವರ: ಪಾಠ ಪುಸ್ತಕಗಳಿಂದ ಲಭಿಸುವ ಅಧ್ಯಯನ ಮಾತ್ರ ಸಾಲದು ಇಂದಿನ ಸಮಾಜದಲ್ಲಿ ಜೀವಿಸಬೇಕಾದರೆ ಪಾಠ ಪುಸ್ತಕಗಳಿಂದ ಲಭಿಸುವ ಅಧ್ಯಯನದ ಜೊತೆಯಾಗಿ ಲಭಿಸುವ ಇತರ ಅಧ್ಯಯನಗಳು ಕಲಿಕೆಯಲ್ಲಿ ಇನ್ನಷ್ಟು ಉತ್ತೇಜನವನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉದ್ಯಾವರ ಜಮಾಹತ್ ಮಹಲ್ ಕಮಿಟಿಯ ಮದ್ರಸ ವಿದ್ಯಾರ್ಥಿಗಳು ಆಯೋಜಿಸಿದ ಪ್ರಾಚೀನ ಕಾಲದ ಹಾಗೂ ಇತರ ವೈವಿಧ್ಯಯಮಯ ವಸ್ತುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ವಿದ್ಯಾರ್ಥಿಗಳು ಸ್ವ ಇಚ್ಚೆಯಿಂದ ನಿರ್ಮಿಸಲಾದ ಪೀಠೋಪಕರಣಗಳು, ಪ್ರಾಚೀನ ಕಾಲದ ಕೆಲವೊಂದು ವಸ್ತುಗಳು, ಮದ್ರಸ ಅಧ್ಯಯನಕ್ಕಿರುವ ವಸ್ತುಗಳು ಪ್ರದರ್ಶನದಲ್ಲಿ ನೋಡುಗರನ್ನು ಆಕರ್ಷಿಸಿತು. ಎಕ್ಸ್‌ಪೋ ಉದ್ಘಾಟನೆಯನ್ನು ಸಮಿತಿಯ ಹಿರಿಯ ಸದಸ್ಯ ಮಹಮೂದ್ ನಿಶಾ ನೆರವೇರಿಸಿದರು. ಈ ಸಂದರ್ಭ ಅಬೂಬಕ್ಕರ್ ಹಾಜಿ, ಸಿದ್ದೀಖ್ ಮುಸ್ಲಿಯಾರ್, ಉಮರುಲ್ ಫಾರೂಕ್ ಅಮಾನಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *