Header Ads
Header Ads
Breaking News

ಉದ್ಯಾವರದ ಮೀನುಗಾರ ತಂಡಕ್ಕೆ ಸಂಕಷ್ಟ : ಮೀನುಗಾರಿಕೆಗೆ ಸಿದ್ಧಪಡಿಸಿಕೊಂಡ ತಾಮ್ರದ ಸಲಕರಣೆ ಕಳವು

ಮೀನುಗಾರರದ್ದು ಸಹಾಸದ ಬದುಕು.. ನೀರಿನ ಮೇಲಿನ ಬದುಕಿನಲ್ಲಿ ಏನೂ ಆಗಬಹುದು.. ಒಂದೆಡೆ ಹವಾಮಾನ ಕೈಕೊಟ್ಟರೆ, ಇನ್ನೊಮ್ಮೆ ಮೀನಿಲ್ಲದೇ ಮೀನುಗಾರು ಸಂಕಷ್ಟಪಡುವುದುಂಟು..ಆದ್ರೆ ಇದು ಎರಡನ್ನೂ ಮೀರಿಸಿದ ಸಂಕಷ್ಟ ಇದೇನು ಸಂಕಷ್ಟ ಅಂತೀರಾ… ಇಲ್ಲಿದೆ ನೋಡಿ ಸ್ಟೋರಿ.

ಹೌದು ಯಾಂತ್ರಿಕೃತ ಮೀನುಗಾರಿಕೆ ಅವಧಿ ಮುಗಿಯುತ್ತಿದ್ದಂತೆ ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಆರಂಭವಾಗುತ್ತದೆ ನಾಡದೋಣಿ ಮೀನುಗಾರಿಕೆ ಈ ಬಾರಿ ವಿಳಂಬ ಆರಂಭಗೊಂಡಿದ್ದು ಪ್ರಸ್ತುತ ನಾಲ್ಕೈದು ದಿನಗಳಿಂದ ಸತತವಾಗಿ ಮಳೆ ಸುರಿಯುವುದರಿಂದ ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದೆ. ಆದ್ರೆ ಅನೇಕ ಸಂಕಷ್ಟದ ನಡುವೆ ಮತ್ತೊಂದು ಸಂಕಷ್ಟ ಮೀನುಗಾಗರರಿಗೆ ಎದುರಾಗಿದೆ.ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮದ ಪಡುಕೆರೆ 45 ಜನರ ತಂಡ ಶ್ರೀ ಪಂಡರಿನಾಥ ಪ್ರಸಾದ್ ನಾಡದೋಣಿ ಮೀನುಗಾರಿಕೆಗೆ ತೆರಳಲು ಎಲ್ಲಾ ಸಿದ್ಧತೆ ಗೊಂಡಿದೆ ಇಂದು ಬೆಳಿಗ್ಗೆ 3ಗಂಟೆಗೆ ಮೀನುಗಾರಿಕೆಗೆ ತೆರಳಲು ದೋಣಿಯನ್ನು ಸಮುದ್ರಕ್ಕೆ ಇಳಿಸಲು ತಯಾರಿ ನಡೆಸಿರುವ ವೇಳೆ ದೋಣಿಯಲ್ಲಿ ಮನಕಲಕುವ ದೃಶ್ಯ ಒಂದು ಕಂಡುಬರುತ್ತದೆ. ತಾವು ಮೀನುಗಾರಿಕೆಗೆ ಸಿದ್ಧಪಡಿಸಿಕೊಂಡ ಧಾರ ತಾಮ್ರದ ಸಲಕರಣೆಗಳು ಕಳವಾಗಿದೆ. ಸುಮಾರು 1.15 ಲಕ್ಷ ರೂಪಾಯಿಯ ಸ್ವತ್ತುಗಳು ಕಳವಾಗಿದೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಾಡದೋಣಿ ದುಡಿಯುವ ಎಲ್ಲಾ ಮೀನುಗಾರರು ದೋಣಿಯಲ್ಲಿ ಗಳಿಸಿದ ಮೊತ್ತವನ್ನು ಸಮಾನವಾಗಿ ಹಂಚುವ ಪದ್ಧತಿ ಇದೆ. ಎರಡು ತಿಂಗಳು ಕಾಲ ನಾಡ ದೋಣಿಯಲ್ಲಿ ಸಂಪಾದಿಸಿ ತಮ್ಮ ಜೀವನವನ್ನು ಸಾಗಿಸುತ್ತಾರೆ ಆದರೆ ಇಂದು ನಡೆದ ಘಟನೆ ತಮ್ಮ ಹೊಟ್ಟೆಗೆ ತಣ್ಣೀರೆರಚಿದಂತಾಗಿದೆ. ಮೀನುಗಾರರು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

Related posts

Leave a Reply

Your email address will not be published. Required fields are marked *