Header Ads
Header Ads
Breaking News

ಉದ್ಯಾವರ ಮಾಡದ ಯು.ಎಂ ಕಾಂಪ್ಲೆಕ್ಸ್‌ನಲ್ಲಿ ಡೆನ್‌ಮಾರ್ಕ್ ದಂತ ಚಿಕಿತ್ಸಾಲಯ ಶುಭಾರಂಭ

ಮಂಜೇಶ್ವರ: ಉದ್ಯಾವರ ಮಾಡದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಯು ಎಂ ಕಾಂಪ್ಲೆಕ್ಸ್‍ನ ಮೊದಲ ಮಹಡಿಯಲ್ಲಿ ಅತ್ಯಾಧುನಿಕ ರೀತಿಯ ಡೆನ್‍ಮಾರ್ಕ್ ದಂತ ಚಿಕಿತ್ಸಾಲಯ ಶುಭಾರಂಭಗೊಂಡಿದೆ.

ದಂತ ವೈದ್ಯರುಗಳಾದ ಮಾಹಿರ್ ಹಾಗೂ ಸಿರಾಜ್ ನೇತ್ರತ್ವದಲ್ಲಿ ಉನ್ನತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ. ಸಂಯುಕ್ತ ಜಮಾಹತ್ ಅಧ್ಯಕ್ಷ ಅತಾವುಲ್ಲ ತಂಘಲ್ ದಂತ ಚಿಕಿತ್ಸಾಲಯವನ್ನು ಉದ್ಘಾಟಿಸಿ ಅಶೀರ್ವಚನ ನೀಡದರು.ಮಾಜಿ ಪಂ. ಅಧ್ಯಕ್ಷ ಯು ಎ ಖಾದರ್ ಅಧ್ಯಕ್ಷತೆ ವಹಿಸಿದರು. ಯೇನಪೋಯ ದಂತ ವೈದ್ಯಕೀಯ ಕಾಲೇಜಿನ ಮಾಜಿ ಪ್ರೊಫೆಸರ್ ಶಾಹಲ್ ಹಮೀದ್ ಮುಖ್ಯ ಅತಿಥಿಯಾಗಿದ್ದರು.

ಇಲ್ಲಿ ದಂತ ಸ್ವಚ್ಚತೆ, ದಂತಕುಳಿ ತುಂಬುವಿಕೆ, ರೂಟ್ ಕೇನಲ್, ಕ್ರೌನ್ ಮತ್ತು ಬ್ರಿಡ್ಜ್, ಹಲ್ಲು ಕೀಳುವಿಕೆ, ಹಲ್ಲಿನ ಎಕ್ಸ್ ರೇ, ವಕ್ರದಂತಹ ಚಿಕಿತ್ಸೆಗಳು ಲಭ್ಯವಿದೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 6.30 ರ ತನಕ ಚಿಕಿತ್ಸಾಲಯ ಕಾರ್ಯಾಚರಿಸಲಿದೆ. ಬಾನುವಾರ ರಜೆಯಾಗಿದೆ.

ಚಿಕಿತ್ಸಾಲಯದ ಬಗ್ಗೆ ಡೆನ್ ಮಾರ್ಕ್ ಚಿಕಿತ್ಸಾಲಯದ ಆಡಳಿತ ನಿರ್ಧೇಶಕ ಹಾಗೂ ವೈದ್ಯರಾದ ಮಾಹಿರ್ ರವರು ಮಾತನಾಡಿ -ಅತ್ಯಾಧುನಿಕ ರೀತಿಯಲ್ಲಿರುವ ದಂತ ಚಿಕಿತ್ಸಾಲಯವನ್ನು ನಾವು ಆರಂಭಿಸಿರುತ್ತೇವೆ. ರೋಗಿಗಳಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡುವುದು ನಮ್ಮ ಮೊದಲ ಆಧ್ಯತೆಯಾಗಿದೆ. ಊರಿನವರ ಸಹಕಾರ ಕೂಡಾ ನಮಗೆ ಅಗತ್ಯವಾಗಿದೆ. ಅತ್ಯಾಧುನಿಕವಾದ ಕ್ಯಾನ್ಸರ್ ಸ್ಕ್ರೀನಿಂಗ್ ನಂತಹ ಉಪಕರಣಗಳನ್ನು ಅಳವಡಿಸಿ ರೋಗಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳೊಂದಿಗೆ ಚಿಕಿತ್ಸೆಯನ್ನು ನೀಡಲು ಉದ್ದೇಶಿಸಿರುವುದರೊಂದಿಗೆ ಯೇನಪೋಯ ದಂತಹ ಉನ್ನತ ಆಸ್ಪತ್ರೆಗಳಿಂದ ಕೂಡಾ ವೈದ್ಯರುಗಳ ಬೇಟಿ ಲಭ್ಯವಿರುವುದಾಗಿ ಅವರು ಹೇಳಿದರು.

ಅದೇ ರೀತಿ ಡೆನ್ ಮಾರ್ಕ್ ಚಿಕಿತ್ಸಾಲಯದ ಇನ್ನೋರ್ವ ಆಡಳಿತ ನಿರ್ಧೇಶಕ ಹಾಗೂ ವೈದ್ಯರಾದ ಸಿರಾಜ್ ರವರು ಮಾತನಾಡಿ  ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆಯನ್ನು ನೀಡಲು ನಾವು ಬದ್ದರಾಗಿದ್ದೇವೆ. ಬಡ ರೋಗಿಗಳಿಗೆ ದರದಲ್ಲಿ ರಿಯಾಯಿಒತಿಯನ್ನು ಕೂಡಾ ನೀಡುವ ಉದ್ದೇಶವನ್ನು ಇಟ್ಟು ಕೊಂಡಿದ್ದೇವೆ. ದಂತ ಚಿಕಿತ್ಸಾಲಯದಲ್ಲಿರಬೇಕಾದ ಎಲ್ಲಾ ಸೌಕರ್ಯಗಳನ್ನು ನಿಡಲಾಗುತ್ತದೆ. ಅತ್ಯಾಧಿನಿಕ ರೀತಿಯ ತಂತ್ರ ಜ್ಞಾನವನ್ನೇ ಬಳಸಿ ನಾವು ಚಿಕಿತ್ಸೆಯನ್ನು ನೀಡಲಿರುವುದಾಗಿ ಅವರು ಹೇಳಿದರು.

ಬಳಿಕ ದಂತ ಚಿಕಿತ್ಸಾಲಯಕ್ಕೆ ಆಗಮಿಸಿದ ಕೇರಳ ವ್ಯಾಪಾರಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಕೋಶಾಧಿಕಾರಿ ಹಸೈನಾರ್ ರವರು ಮಾತನಾಡಿ  ಈ ಪರಿಸರದಲ್ಲಿ ದಂತ ಚಿಕಿತ್ಸಾಲಯ ಅಗತ್ಯವಿದೆ. ಹಲವಾರು ರೋಗಿಗಳು ಇತರ ಕಡೆಗೆ ಸಾಗುತಿದ್ದಾರೆ. ಈ ನಿಟ್ಟಿನಲ್ಲಿ ಉದ್ಯಾವರ ಮಾಡದಲ್ಲಿ ಅತ್ಯಾಧುನಿಕ ಸಜ್ಜೀಕರಣಗಳೊಂದಿಗೆ ಆರಂಭಗೊಂಡಿರುವ ಡೆನ್ ಮಾರ್ಕ್ ಚಿಕಿತ್ಸಾಲಯ ಉತ್ತಮವಾದ ರೀತಿಯಲ್ಲಿ ಕಾರ್ಯಾಚರೈಸಲಿ ಎಂದು ಹೇಳಿ ಶುಭವನ್ನು ಹಾರೈಸಿದರು.

ಶುಭಾರಂಭ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *