Header Ads
Breaking News

ಉದ್ಯಾವರ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವದ ನೇಮೋತ್ಸವ : ವಿಜೃಂಭಣೆಯಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳು

ಮಂಜೇಶ್ವರ ಉದ್ಯಾವರ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವದ ನೇಮೋತ್ಸವ, ಬಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಮಂಜೇಶ್ವರ ಉದ್ಯಾವರ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವದ ನೇಮೋತ್ಸವ, ಬಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಉದ್ಯಾವರ ಮಾಡ ಕ್ಷೇತ್ರದ ವಿಶೇಷವೆಂದರೆ ಶ್ರೀ ಅರಸು ದೈವದ ಜಾತ್ರೆಯಲ್ಲಿ ಮುಸ್ಲಿಂ ಬಾಂಧವರೂ ಪಾಲ್ಗೊಳ್ಳುವುದು. ಹೌದು, ಈ ಕ್ಷೇತ್ರದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಂತೆ ನೇಮೋತ್ಸವ ನಡೆಯುವ ದಿನದಂದು ಮಸೀದಿಯ ಪ್ರಮಖರು ದೈವಸ್ಥಾನಕ್ಕೆ ಆಗಮಿಸುತ್ತಾರೆ. ಅವರಿಗೆ ಕೂರಲು ದೈವಸ್ಥಾನದಲ್ಲಿ ವಿಶೇಷವಾದ ಸ್ಥಳವನ್ನು ಕೊಟ್ಟು, ಗೌರವದಿಂದ ಕಾಣುತ್ತಾರೆ. ಜಾತ್ರೆಯ ದಿನ ದೈವಗಳು ಆಶೀರ್ವದಿಸಿ ನೀಡಿದ ಹೂವನ್ನು ಜಮಾತಿನವರಿಗೆ ನೀಡಲಾಗುತ್ತದೆ. ಈ ಪವಿತ್ರವಾದ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಭೇದಭಾವವಿಲ್ಲದೆ ಹಿಂದೂ ಮುಸಲ್ಮಾನರು ಪಾಲ್ಗೊಳ್ಳುದು ಇಲ್ಲಿಯ ವಿಶೇಷತೆಯಾಗಿದೆ.

ಮೇ 9ರಿಂದ ಆರಂಭಗೊಂಡ ಉತ್ಸವದಲ್ಲಿ ಭಾನುವಾರ ನೇಮೋತ್ಸವ ಹಾಗು ಬಂಡಿ ಉತ್ಸವ ಸಮಾಪ್ತಿಗೊಂಡಿತು ಮೇ 15ರಂದು ಧ್ವಜ ಇಳಿಯುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಕ್ಷೇತ್ರದ ಉತ್ಸವಕ್ಕೆ ನಾನಾ ಕಡೆಯಿಂದ ಭಕ್ತಾಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಕ್ಷೇತ್ರದ ಮೊಕ್ತೇಸರಾದ ದಯಾಕರ ಮಾಡ, ಮೋಹನ್ ಶೆಟ್ಟಿ, ಮಾಧವ ಸಾಲಿಯಾನ್, ಮಾಧವ ಕೆ ಸೇರಿದಂತೆ ಉತ್ಸವ ಸಮಿತಿ ಪದಾಧಿಕಾರಿಗಳು ಹತ್ತು ಗ್ರಾಮಸ್ಥರು ಸೇರಿದಂತೆ ಹಲವಾರು ಮಂದಿ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾದರು.

Related posts

Leave a Reply

Your email address will not be published. Required fields are marked *