Header Ads
Breaking News

ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಉತ್ಸವಕ್ಕೆ ಚಾಲನೆ: ಅದ್ಧೂರಿಯಾಗಿ ನಡೆಯಲಿದೆ ಜಾತ್ರೋತ್ಸವ

ಇತಿಹಾಸ ಪ್ರಸಿದ್ದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೆಗೆ ಚಾಲನೆ ದೊರಕಿದ್ದು, ಮೇ 15ರವರೆಗೆ ಜಾತ್ರೋತ್ಸವ ಬಹಳ ಅದ್ದೂರಿಯಾಗಿ ನಡೆಯಲಿದೆ.

ಹೌದು..ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಈಗ ವಾರ್ಷಿಕ ಜಾತ್ರೆಯ ಸಂಭ್ರಮ ಮನೆಮಾಡಿದೆ. ಆ ಪ್ರಯುಕ್ತ ನಿನ್ನೆ ರಾತ್ರಿ ಶ್ರೀ ಕ್ಷೇತ್ರದಲ್ಲಿ ಧ್ವಜಾರೋಹಣ ನಡೆಯಿತು. ಹಾಗೆಯೇ ಇಂದು ತಾಳಮದ್ದಳೆ, ಭಕ್ತಿ ರಸ ಮಂಜರಿ, ರಾತ್ರಿ 1 ರಿಂದ ಕೋಟ್ಯದಾಯನ ನೇಮ, ಕಟ್ಟೆ ಪೂಜೆ, ಕೆರೆ ದೀಪೋತ್ಸವ ಹಾಗೂ ಮೇ 11 ರಿಂದ ಕಂಚಿಲ ಸೇವೆ, ದೀಪೋತ್ಸವ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಧ್ವಜಾರೋಹಣಕ್ಕೆ ಕ್ಷೇತ್ರದ ಮೊಕ್ತೇಸರಾದ ದಯಾಕರ ಮಾಡ, ಮೋಹನ್ ಶೆಟ್ಟಿ, ಮಾಧವ ಸಾಲಿಯಾನ್, ಮಾಧವ ಕೆ ಸೇರಿದಂತೆ ಉತ್ಸವ ಸಮಿತಿ ಪದಾಧಿಕಾರಿಗಳು ಹತ್ತು ಗ್ರಾಮಸ್ಥರು ಸೇರಿದಂತೆ ಹಲವಾರು ಮಂದಿ ಮುಂದಾಳತ್ವವನ್ನು ನೀಡಿದರು.

ಇನ್ನು ಹಿಂದೂ ಮುಸ್ಲಿಂ ಸಾಮರಸ್ಯತೆಯನ್ನು ಸಾರುವ ಕ್ಷೇತ್ರದ ಉತ್ಸವದಲ್ಲಿ ಧ್ವಜಾರೋಹಣದಂದು ರಾತ್ರಿ ಸಾಮರಸ್ಯತೆಗೆ ಧಕ್ಕೆಯನ್ನುಂಟುಮಾಡುವ ಉದ್ದೇಶದಲ್ಲಿ ಯಾರೋ ಕಿಡಿಗೇಡಿಗಳು ತೋರಣಕ್ಕೆ ಹಾನಿಯನ್ನುಟ್ಟುಂಟು ಮಾಡಿದ್ದಾರೆ. ಹಾಗಾಗಿ ಅಕ್ರಮ ಎಸೆಗಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿರುವುದಾಗಿಯೂ ಕ್ಷೇತ್ರದ ಮೊಕ್ತೇಸರ ದಯಾಕರ ಮಾಡ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *