Header Ads
Breaking News

ಉಪವಾಸ ಆತ್ಮದ ಸಂಸ್ಕರಣೆಗಾಗಿ ಮತ್ತು ದೇಹದ ಪರಿಶೋಧನೆಗಾಗಿ : ಜ| ಅಕ್ಬರ್ ಅಲಿ ಹೇಳಿಕೆ

ಉಪವಾಸ ಆತ್ಮದ ಸಂಸ್ಕರಣೆಗಾಗಿ ಮತ್ತು ದೇಹದ ಪರಿಶೋಧನೆಗಾಗಿ ನಡೆಸುವ ಚಟುವಟಿಕೆಯಾಗಿದೆ. ಈದ್‌ನ ಸಂಭ್ರಮದಲ್ಲಿ ನಡೆಸುವ ಉಪವಾಸವು ಕೇವಲ ಹೊಟ್ಟೆಗೆ ಮಾತ್ರಾ ಸೀಮಿತವಾಗಿರುವಂತದಲ್ಲ. ಬದಲಾಗಿ ಮಾನವನ ದೇಹದ ಪ್ರತೀಯೊಂದು ಅಂಗಾಂಗಳು ಮತ್ತು ಕ್ರಿಯಾ ಚಟುವಟಿಕೆಗಳಿಗೂ ಇದರ ಕರ್ಮಗಳು ಅನ್ವಯವಾಗುತ್ತವೆ ಎಂದು ಸದ್ಬಾವನಾ ಮಂಚ್‌ನ ರಾಜ್ಯ ಕಾರ್ಯದರ್ಶಿ ಜ| ಅಕ್ಬರ್ ಅಲಿ ಉಡುಪಿ ಹೇಳಿದರು. ಅವರು ಕಾಪು ಜಮೀಯ್ಯತ್ತುಲ್ ಫಲಾಹ್ ಸಂಸ್ಥೆಯ ವತಿಯಿಂದ ಪ್ರೆಸ್ ಕ್ಲಬ್‌ನ ಸದಸ್ಯರೊಂದಿಗೆ ಸಿಟಿ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾದ ಈದ್ ಸಮ್ಮಿಳನ ಕಾರ್ಯಕ್ರಮದಲ್ಲಿ ಅವರು ಈದ್ ಸೌಹಾರ್ದ ಸಂದೇಶ ನೀಡುತ್ತಾ ಮಾತನಾಡಿದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ ಕಟಪಾಡಿ ಮಾತನಾಡಿ, ಸಮಾಜದ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡುವ ಪತ್ರಕರ್ತರನ್ನು ಕಾಡುವ ಧರ್ಮಗಳ ಆಚರಣೆಯ ಕುರಿತಾದ ವ್ಯತ್ಯಾಸಗಳು ಮತ್ತು ಪದ್ಧತಿಗಳನ್ನು ತಿಳಿಸಿಕೊಡುವಲ್ಲಿ ಈ ಕಾರ್ಯಕ್ರಮ ಅತ್ಯಂತ ಸ್ವಾಗತಾರ್ಹವಾದುದ್ದಾಗಿದೆ. ಎಲ್ಲಾ ಧರ್ಮಗಳ ಜನರೊಂದಿಗೆ ಬೆರೆತು, ಅವರ ಆಚರಣೆಗಳ ಬಗ್ಗೆ ತಿಳಿದುಕೊಂಡರೆ ಸಮಾಜದಲ್ಲಿ ಸೌಹಾರ್ದತೆ ಬೆಳೆಯಲು ಸಾಧ್ಯವಿದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ,ಸಂಘಟಕರಾದ ಮುಹಮ್ಮದ್ ಇಕ್ಬಾಲ್ ಸಾಹೇಬ್, ಜಮೀಯತ್ತುಲ್ ಫಲಾಹ್‌ನ ಅಧ್ಯಕ್ಷ ಶಬ್ಬೀರ್ ಅಹಮ್ಮದ್ ಖಾಝಿ, ಕಾಪು ಪ್ರೆಸ್ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *