Header Ads
Breaking News

ಉಪ್ಪಳದ ಕೊಂಡೆಯೂರಿನಲ್ಲಿ ರಕ್ಷಣಾ ಪಡೆಯ ಉಚಿತ ನೇಮಕಾತಿಗೆ ಚಾಲನೆ

ಉಪ್ಪಳದ ಕೊಂಡೆಯೂರಿನಲ್ಲಿ ಮುಂದಿನ ಒಂದು ತಿಂಗಳ ಕಾಲ ನಡೆಯಲಿರುವ ರಕ್ಷಣಾ ಪಡೆಯ ಉಚಿತ ನೇಮಕಾತಿಗೆ ಚಾಲನೆ ದೊರಕಿತು.

ಕಾಸರಗೋಡು ಯುವಕರನ್ನು ಸೇನೆಗೆ ಸೇರಲು ಸಜ್ಜಾಗಿಸುವ ಉದ್ದೇಶದಿಂದ ಅವಾಕ ಕಾಸರಗೋಡು ಟ್ರಸ್ಟ್ ಹಾಗೂ ಕೊಂಡೆಯೂರು ನಿತ್ಯಾನಂದ ಯೋಗಾಶ್ರಮ ಮಹಾಪೀಠ ಚಾರಿಟೇಬಲ್ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ಒಂದು ತಿಂಗಳಿನ ತನಕ ನಡೆಯಲಿರುವ ಉಚಿತ ರಕ್ಷಣಾ ಪಡೆ ನೇಮಕಾತಿಗೆ ಸಾಮಾಜಿಕ ಕಾರ್ಯಕರ್ತರ ಹಾಗೂ ಊರವರ ಸಹಕಾರದೊಂದಿಗೆ ಉಜ್ವಲ ಚಾಲನೆ ದೊರಕಿದೆ.

ಕಳೆದ ದಿವಸ ನಡೆದ ಸ್ಕ್ರೀನ್ ಟೆಸ್ಟ್ ನಲ್ಲಿ ಆಯ್ಕೆಯಾದ 60 ಯುವಕರಿಗೆ ಉಚಿತವಾಗಿ ಎಲ್ಲಾ ಸಜ್ಜೀಕರಣಗಳೊಂದಿಗೆ ಮೇ 15 ರಿಂದ ಜೂನ್ 15 ರ ತನಕ ತರಭೇತಿ ಶಿಬಿರ ನಡೆಯಲಿದೆ. ಉಪ್ಪಳ ಕೊಂಡೆಯೂರು ನಿತ್ಯಾನಂದ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ನಿತ್ಯಾನಂದ ಯೋಗಾಶ್ರಮ ಸ್ವಾಮೀಜಿ ಯೋಗಾನಂದ ಸ್ವಾಮೀಜಿ ದೀಪ ಉರಿಸಿ ಉದ್ಘಾಟಿಸಿದರು.

ಅವಾಕ್ ಕಾಸರಗೋಡು ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ನಿವೃತ ಸೈನಿಕ ನಾರಾಯನ ಪಿಳ್ಳೆ, ನಿವೃತ ಸೈನಿಕ ವಿಜಯ, ಮೋಹನ್ ದಾಸ್ ಕೊಂಡೆಯೂರು, ಸಾಮಾಜಿಕ ಕಾರ್ಯಕರ್ತರಾದ ಪಿ ಸುರೇಶ್ ಕುಮಾರ್ ಶೆಟ್ಟಿ, ಪುರುಇಷೋತ್ತಮ ಪ್ರತಾಪ ನಗರ, ಸುಧಾಮ ಗೋಸಾಡ, ರಾಮಪ್ಪ ಮಂಜೇಶ್ವರ ಮೊದಲಾದವರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *