Header Ads
Header Ads
Breaking News

ಉಪ್ಪಳದ ವ್ಯಾಪಾರಿ ಭವನದಲ್ಲಿ ಶಾಂತಿ ಸಭೆ ಕಾಸರಗೋಡು ಡಿವೈಎಸ್ಪಿ ಪ್ರದೀಪ್ ನೇತೃತ್ವದಲ್ಲಿ ಸಭೆ

ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ಹರತಾಳಕ್ಕೆ ಸಂಬಂಧಿಸಿ ಉಂಟಾದ ಘರ್ಷಣೆಗೆ ಸಂಬಂಧಿಸಿ ಉಪ್ಪಳದ ವ್ಯಾಪಾರಿ ಭವನದಲ್ಲಿ ಶಾಂತಿ ಸಭೆ ನಡೆಯಿತು. ಕಾಸರಗೋಡು ಡಿವೈಎಸ್ಪಿ ಪ್ರದೀಪ್ ಕುಮಾರ್ ರವರ ನೇತೃತ್ವದಲ್ಲಿ ವಿವಿಧ ರಾಜಕೀಯ ಮುಖಂಡರು, ಸಂಘಟನೆಯ ಪ್ರಮುಖರು ಹಾಗೂ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಯಿತು.

ಶಾಂತಿ ಸಭೆಗೆ ಬಿಜೆಪಿ ಪಕ್ಷದ ಯಾವುದೇ ಪ್ರತಿನಿಧಿ ಹಾಜರಾಗದೆ ಬಹಿಷ್ಕರಿಸಿದರು. ಉಳಿದ ಎಲ್ಲಾ ರಾಜಕೀಯ ಹಾಗೂ ಸಂಘಟನೆಯ ಮುಖಂಡರಾದ ರಜಾಕ್ ಚಿಪ್ಪಾರ್, ಬಿ ವಿ ರಾಜನ್, ಎ ಕೆ ಎಂ ಅಶ್ರಫ್, ಶಾಹುಲ್ ಹಮೀದ್, ಹರ್ಷಾದ್ ವರ್ಕಾಡಿ, ಉಮ್ಮರ್ ಬೋರ್ಕಳ, ಫರೀದಾ ಶಕೀರ್, ಶಂಸಾದ್ ಶುಕೂರ್ ಮೊದಲಾದವರು ಭಾಗವಹಿಸಿದ್ದರು.ಹಲವು ಮುಖಂಡರು ಪೊಲೀಸರ ಭಾಗದಿಂದ ವೈಪಲ್ಯವಾಗಿರುವುದಾಗಿ ಆರೋಪಿಸಿದರೆ, ಇನ್ನು ಕೆಲವು ಮುಖಂಡರು ಹರತಾಳಕ್ಕೆ ಆಹ್ವಾನ ನೀಡಿದ ಮುಖಂಡರಿಂದಲೇ ವೈಪಲ್ಯವಾಗಿರುವುದಾಗಿ ಆರೋಪಿಸಿದ್ದಾರೆ. ಗಡಿ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಮಂಜೇಶ್ವರದ ಕೆಲವೊಂದು ಪ್ರದೇಶಗಳಲ್ಲಿ ಇನ್ನೂ ಎರಡು ಠಾಣೆಗಳನ್ನು ಸ್ಥಾಪಿಸುವಂತೆ ಸಭೆಯಲ್ಲಿ ಒತ್ತಾಯ ಕೇಳಿ ಬಂತು. ತಪ್ಪೆಸೆಗಿದವರ ಬಗ್ಗೆ ಸಾರ್ವಜನಿಕರು ಕೂಡಾ ಪೊಲೀಸರೊಂದಿಗೆ ಸಹಕರಿಸಿದರೆ ಊರಲ್ಲಿ ಶಾಂತಿಯನ್ನು ಕಾಪಾಡಬಹುದು ಎಂದು ಡಿವೈಎಸ್ಪಿ ಹೇಳಿದರು.

Related posts

Leave a Reply