Header Ads
Header Ads
Header Ads
Header Ads
Header Ads
Header Ads
Breaking News

ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರ ನದಿ : ದಕ್ಷಿಣಕಾಶಿ ಕ್ಷೇತ್ರದಲ್ಲಿ ಸಂಗಮ ಸಾಧ್ಯತೆ

ಪುತ್ತೂರು:  ಕಳೆದ 4ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆರಾಯನ ಅಬ್ಬರದಿಂದ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರದಲ್ಲಿ ನೆರೆ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಇಕ್ಕೆಲಗಳಲ್ಲಿನ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತ ಗೊಂಡು ಸ್ಥಳೀಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ, ವಳಾಲು ಬೈಲು ಪ್ರದೇಶಗಳಲ್ಲಿ ನೆರೆ ನೀರು ರಸ್ತೆಯ ಅಂಚಿನಲ್ಲಿ ತುಂಬಿದ್ದು, ಹೆದ್ದಾರಿ ತಡೆಯಾಗುವ ಭೀತಿಯೂ ಎದುರಾಗಿದೆ. ಉಪ್ಪಿನಂಗಡಿ ಪರಿಸರದ ನಟ್ಟಿಬೈಲು, ಪಟ್ಲ ಕಂಗಿನಾರು ಬೆಟ್ಟು, ರಂಗಾಜೆ ಮತ್ತಿತರ ಪ್ರದೇಶಗಳಲ್ಲಿ ಕೃಷಿಕ ವರ್ಗದ ತೋಟ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡು ರೈತರಲ್ಲಿ ಕೃಷಿ ಕೊಳೆಯುವ ಭೀತಿ ಎದುರಾಗಿದೆ.

ಕಳೆದ ವರ್ಷ ಈ ಸಹಸ್ರಲಿಂಗೇಶ್ವರ-ಮಹಾಕಾಳಿ ಕ್ಷೇತ್ರದಲ್ಲಿ ಮೂರು ಬಾರಿ ಸಂಗಮವಾಗಿದೆ. ಪ್ರತಿ ವರ್ಷವೂ ಜೀವನದಿಗಳ ನೀರು ಒಂದಾಗಿ ಇಲ್ಲಿ ಸಂಗಮ ಏರ್ಪಡುವುದು ವಾಡಿಕೆ. ಅಪರೂಪಕ್ಕೆ ಎಂಬಂತೆ ಕೆಲವು ವರ್ಷ ಮಾತ್ರ ಸಂಗಮವಾಗುವುದಿಲ್ಲ. ಸಂಗಮ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಸಂಗಮ ಪೂಜೆ ನಡೆಯುತ್ತದೆ.

ನೇತ್ರಾವತಿ- ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿದ್ದು, ಶುಕ್ರವಾರ ಉಭಯ ನದಿಗಳಲ್ಲಿ ನೀರಿನ ಪ್ರಮಾಣ ನಿರಂತರವಾಗಿ ಏರುವಿಕೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸಂಗಮ ಸಾಧ್ಯತೆ ನಿರೀಕ್ಷೆ ಮಾಡಲಾಗುತ್ತಿದೆ. ಸಂಗಮದ ಹಿನ್ನಲೆಯಲ್ಲಿ ಜನತೆ ತಂಡೋಪತಂಡವಾಗಿ ದೇವಾಲಯದ ಬಳಿಗೆ ಜನತೆ ಬರುತ್ತಿರುವುದು ಕಂಡು ಬರುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್ ಅನಂತ್ ಶಂಕರ್, ಎನ್‍ಡಿಆರ್‍ಎಫ್ ತಂಡ, ಗೃಹ ರಕ್ಷಣಾ ದಳ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಂದಾಯ ನಿರೀಕ್ಷಕ ಜಯವಿಕ್ರಮ್, ಗ್ರಾಮ ಕರಣಿಕ ಚಂದ್ರ ನಾಯ್ಕ, ಗ್ರಾಮ ಸಹಾಯಕ ಯತೀಶ್, ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ, ಈಜುಗಾರರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

Related posts

Leave a Reply

Your email address will not be published. Required fields are marked *