Header Ads
Header Ads
Breaking News

ವಿಟ್ಲ ಠಾಣಾ ವ್ಯಾಪ್ತಿಯ ಗಡಿಯಾರ ಜೋಗಿಬೆಟ್ಟು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ

ವಿಟ್ಲ ಠಾಣಾ ವ್ಯಾಪ್ತಿಯ ಗಡಿಯಾರ ಜೋಗಿಬೆಟ್ಟು ಎಂಬಲ್ಲಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಸಂಭವಿಸಿದೆ. ಗಡಿಯಾರ ಜೋಗಿಬೆಟ್ಟು ಎಂಬಲ್ಲಿಯ ಹಂಝ ಅವರಿಗೆ ಸೇರಿದ ಮನೆಯಲ್ಲಿ ನೆಕ್ಕಿಲಾಡಿ ಸಲೀಂ ಅವರು ಕುಟುಂಬ ಸಹಿತ ಒಂದು ವರ್ಷದಿಂದ ವಾಸವಾಗಿದ್ದರು. ನಿನ್ನೆ ರಾತ್ರಿ ಮನೆಮಂದಿ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಬೆಳಿಗ್ಗೆ ಮನೆಯ ಹಂಚು ತೆರೆದಿತ್ತು. ಈ ಬಗ್ಗೆ ಮನೆ ಮಾಲೀಕರು ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಮನೆಯ ಹಂಚನ್ನು ತೆರೆದು ಅದರ ಮೂಲಕ ಒಳನುಗ್ಗಿದ ಕಳ್ಳರು ಈ ಕೃತ್ಯ ಎಸೆಗಿದ್ದಾರೆ. ಮನೆಯ ಕಪಾಟಿನಲ್ಲಿದ್ದ ಚಿನ್ನ ಬಳೆ, ನೆಕ್ಲೇಸ್, ಬ್ಯಾಸ್ಲೇಟ್, ಉಂಗುರ ಸೇರಿದಂತೆ ಅಂದಾಜು ೩೫ ಪವನ್ ಚಿನ್ನ ಹಾಗೂ ಒಂದು ಲಕ್ಷ ರೂ. ನಗದು ದೋಚಲಾಗಿದೆ. ಸ್ವಂತ ಮನೆ ಕಟ್ಟುವ ಉದ್ದೇಶದಿಂದ ಚಿನ್ನ ಹಾಗೂ ಹಣವನ್ನು ಸಂಗ್ರಹಿಸಿ ಇಡಲಾಗಿತ್ತು. ಅದೀಗ ಕಳ್ಳರ ಪಾಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿದ್ದಾರೆ.


Related posts

Leave a Reply

Your email address will not be published. Required fields are marked *