Header Ads
Header Ads
Breaking News

ಬಳ್ಕುಂಜೆ : ಉಪ್ಪು ನೀರಿನಿಂದ ಕೂಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಮಳೆಯ ಪ್ರಮಾಣ ಕಡಿಮೆಯಾದ ಕಾರಣ 10 ಗ್ರಾಮ ಪಂಚಾಯತ್ ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಉಪ್ಪು ನೀರಿನ ಕಾರಣದಿಂದ ಎರಡು ದಿನದಿಂದ ನಿಲುಗಡೆಯಾಗಿದೆ. ಹೌದು ಶಾಂಭವಿ ನದಿಯಲ್ಲಿ ಉಪ್ಪು ನೀರು ಹರಿಯುತ್ತಿರುವ ಕಾರಣ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದೆ.ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂಭವಿ ನದಿಯಲ್ಲಿ ಜಾಕ್ ವೆಲ್ ನಿರ್ಮಿಸಿ ಕೊಲ್ಲುರು ಪದವಿನಲ್ಲಿ ಸ್ಥಾವರ ನಿರ್ಮಿಸಿ 10 ಗ್ರಾಮಪಂಚಾಯತ್ ಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದ ಈ ಯೋಜನೆಯ ಕಾಮಗಾರಿಯನ್ನು ಬೇರೊಂದು ಗುತ್ತಿಗೆದಾರರಿಗೆ ನೀಡಿದ ಕಾರಣ ಕಳೆದ ಬಾರಿ ೯೦ ಶೇಕಡದಷ್ಟು ಕಾಮಗಾರಿ ಮುಗಿದಿದ್ದು ಈ ಬಾರಿಯಿಂದ ನೀರು 10 ಗ್ರಾಮ ಪಂಚಾಯತ್ ಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಈ ಬಾರಿ ಮಳೆ ಇಲ್ಲದೆ ನದಿ ಕೆರೆ ಬಾವಿಗಳು ಬತ್ತಿ ಹೋಗಿದ್ದರೂ, ಈ ಯೋಜನೆಯಿಂದ ಕುಡಿಯುವ ನೀರಿಗೆ ಅಷ್ಟೋಂದು ಸಮಸ್ಯೆ ಉಂಟಾಗಿಲ್ಲ, ಆದರೆ ಸರಿಯಾದ ಮಳೆ ಬಾರದೆ ಕಡಲು ಉಕ್ಕೇರಿ ಇದೀಗ ಶಾಂಭವಿ ನದಿಯಲ್ಲಿ ಉಪ್ಪು ನೀರು ಹಿಮ್ಮುಖವಾಗಿ ಚಲಿಸಿ ಜಾಕ್ ವೆಲ್ ಉಪ್ಪು ನೀರಿನಿಂದ ಕೂಡಿದೆ, ಕಳೆದ ಎರಡು ದಿನಗಳಿಂದ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಸ್ಥಾವರ ಸ್ಥಗಿತವಾಗಿದೆ.

ಸರಿಯಾದ ಪ್ರಮಾಣದಲ್ಲಿ ಮಳೆ ಬಂದರೆ ನದಿಯಲ್ಲಿ ನೀರು ಹರಿದು ಸಮುದ್ರ ಸೇರುವುದರಿಂದ ಸಮುದ್ರದ ನೀರು ಹಿಮ್ಮುಖವಾಗಿ ಬರುವುದಿಲ್ಲ, ಈ ಬಾರಿ ಮಳೆ ತಡವಾದ ಕಾರಣ ಈ ಸಮಸ್ಯೆ ಉದ್ಭವವಾಗಿದೆ, ಕರ್ನಿರೆ ಸಮೀಪದ ಅಣೆಕಟ್ಟಿಗೆ ಉಪ್ಪು ನೀರು ತಡೆಗೆ ವರ್ಷಂಪ್ರತಿ ಬಾಗಿಲು ಹಾಕಲಾಗುತ್ತಿದ್ದು, ಈ ಬಾರಿಯೂ ನವಂಬರ್ ನಲ್ಲಿ ಬಾಗಿಲು ಹಾಕಿ ಮೇ ತಿಂಗಳ ಕೊನೆಯ ವಾರದಲ್ಲಿ ಬಾಗಿಲು ತೆಗೆಯಲಾಗಿದೆ, ಇದರಿಂದ ಉಪ್ಪು ನೀರು ಶಾಂಭವಿ ನದಿಯಲ್ಲಿ ಹರಿದು ಸಮಸ್ಯೆ ಉಂಟಾಗಿದೆ, ಕರ್ನಿರೆ ಅಣೆಕಟ್ಟಿನ ಬಾಗಿಲು ತೆಗೆಯದಿದ್ದರೆ ನದಿಯ ಕೆಳಬಾಗದ ಜನರಿಗೆ ಸಮಸ್ಯೆ, ಬಾಗಿಲು ತೆಗೆದ ಪರಿಣಾಮ ನದಿಯ ಮೇಲ್ಭಾಗದ ಜನರಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ.

ಉಪ್ಪು ನೀರು ಹಿಮ್ಮುಖವಾಗಿ ಹರಿದ ಕಾರಣ ಸಿಹಿ ನೀರಿನಲ್ಲಿದ್ದ ಮೀನುಗಳು ಸಾಯಲಾರಂಬಿಸಿದೆ, ಉಪ್ಪು ನೀರು ಬಂದ ಸಂದರ್ಭ ನದಿ ಬದಿಯ ಜನರಿಗೆ ಭರ್ಜರಿ ಮೀನು ಲಭಿಸಿದೆ, ಇತ್ತ ಚೇಳಾರುನ ಅಣೆಕಟ್ಟು ಬಾಗಿಲು ತೆಗೆದ ಕಾರಣ ನಂದಿನಿ ನದಿಯಲ್ಲೂ ಕಡಲಿನ ಉಪ್ಪು ನೀರು ಹರಿದು ಮೀನುಗಳು ಸಾಯಲಾರಂಭಿಸಿದೆ, ಕಳೆದ ಒಂದು ವಾರದ ಹಿಂದೆ ಪಕ್ಷಿಕೆರೆ ಸಮೀಪದ ಪಂಜದವರೆಗೆ ನೀರು ಹರಿದು ಬಂದಿದ್ದು ಬುಧವಾರ ರಾತ್ರಿ ಪುಚ್ಚಾಡಿ ಅಣೆಕಟ್ಟುವರೆಗೆ ಉಪ್ಪು ನೀರು ಹರಿದು ಬಂದಿದ್ದೆ.

ಬಳ್ಕುಂಜೆ, ಕರ್ನಿರೆ, ಏಳಿಂಜೆ, ಪಂಜ ಅತ್ತೂರು, ಸಂಕಲಕರಿಯ ಮತ್ತಿತರ ಕಡೆಗಳಲ್ಲಿ ಕೃಷ್ಟಿ ಚಟುವಟಿಕೆಗಳು ಹೆಚ್ಚಾಗಿ ಇರುವುದರಿಂದ ರೈತರ ಕೃಷ್ಟಿ ಭೂಮಿಗೂ ಉಪ್ಪು ನೀರು ಹರಿಯುವ ಸಾಧ್ಯತೆ ಇದೆ, ನದಿಯನ್ನೇ ಅವಲಂಭಿಸಿ ಇರುವ ರೈತರಿಗೆ ಇನ್ನಷ್ಟು ಸಮಸ್ಯೆ ಉಂಟಾಗಲಿದೆ.

Related posts

Leave a Reply

Your email address will not be published. Required fields are marked *