Header Ads
Breaking News

ಉಳ್ಳಾಲದಲ್ಲಿ ಆಟೋ ರಿಕ್ಷಾ ಚಾಲಕ-ಮಾಲಕರ ಮಹಾ ಸಂಗಮ : ಸರ್ವಧರ್ಮ ಸಮ್ಮೇಳನ, ಸಾಧಕರಿಗೆ ಸನ್ಮಾನ

ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ ಆಟೋ ರಿಕ್ಷಾ ಚಾಲಕರು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದು ಆ ದಿಸೆಯಲ್ಲಿ ಭಗವಂತನ ಆಶೀರ್ವಾದ ಸದಾ ನಿಮಗಿರಲಿ ಎಂದು ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ನ ಧರ್ಮಗುರು ಫಾ. ಜೆ.ಪಿ. ಸಲ್ದಾನ್ಹ ಹಾರೈಸಿದರು.

ನೇತ್ರಾವತಿ ಆಟೋ ರಿಕ್ಷಾ ಯೂನಿಯನ್ ಮತ್ತು ಕಾನೂನು ಹೋರಾಟ ಸಮಿತಿ ಮಂಗಳೂರು ತಾಲೂಕು ಸಮಿತಿ ಜಂಟಿ ಆಶ್ರಯದಲ್ಲಿ ಉಳ್ಳಾಲ ಭಾರತ್ ಶಾಲಾ ಮೈದಾನದಲಿ ನಡೆದ ಆಟೋ ರಿಕ್ಷಾ ಚಾಲಕ ಮಾಲಕರ ಮಹಾ ಸಂಗಮ ಕಾರ್ಯಕ್ರಮದ ಪ್ರಯುಕ್ತ ನಡೆದ ಸರ್ವಧರ್ಮ ಸಮ್ಮೇಳನ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಚ್ಚಿಲ ಸಂಕೊಳಿಗೆ ಭಗವತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಸುರೇಖ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಟೋ ರಿಕ್ಷಾ ಚಾಲಕರ ಪರವಾಗಿ ಹೈಕೋರ್ಟ್ ನಲ್ಲಿ ಹೋರಾಡಿದ ಹೈಕೋರ್ಟ್ ನ್ಯಾಯವಾದಿ ಧನಂಜಯ್ ಕುಮಾರ್ “ಆಪರೇಶನ್ ವಿಜಯ್” ವೀರ ಸೇನಾನಿ ಪ್ರವೀಣ್ ಶೆಟ್ಟಿ ಪಿಲಾರು ಹಾಗೂ ಸಿಐಎಸ್ ಎಫ್ ಯೋಧ ರಾಜೇಶ್ ಬದಿಯಾರು ಅವರನ್ನು ಸನ್ಮಾನಿಸಲಾಯಿತು. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಕಂಡಪ್ಪ ಕಾರ್ನವರ್, ರಾಜೇಶ್ ನೀರುಮಾರ್ಗ, ದಿನಕರ್ ಬಳ್ಕುಂಜೆ, ರಾಜೇಶ್ ಉಳ್ಳಾಲಬೈಲ್ ಹಾಗೂ ಕಾನೂನು ಹೋರಾಟ ಸಮಿತಿಯ ದಯಾನಂದ ಪಿಲಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *