Header Ads
Header Ads
Breaking News

ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಜಗತ್ತಿನಲ್ಲಿ ಭಾರತ ಎತ್ತರಕ್ಕೆ ಎರಬೇಕೆಂಬ ಅಭಿಮಾನದಿಂದ ಈ ಭಾರಿ ಅಭೂತಪೂರ್ವಕವಾದಂತಹ ಗೆಲುವನ್ನ ನರೇಂದ್ರಮೋದಿ ನೇತ್ರತ್ವದ ಭಾರತೀಯ ಜನತಾ ಪಾರ್ಟಿಗೆ ಜನ ಆಶೀರ್ವಾದ ವನ್ನ ಮಾಡಿದ್ದಾರೆ. ಕಾರ್ಯಕರ್ತರ ಉತ್ಸಾಹವೇ ಹೊರತು ವ್ಯಕ್ತಿಪೂಜೆಯಲ್ಲ ಸಿದ್ದಾಂತ ಮತ್ತು ತತ್ವದ ಆಧಾರದಲ್ಲಿ ಕೆಲಸ ಮಾಡತಕ್ಕಂತಹ ಕಾರ್ಯಕರ್ತರ ಜೊತೆಯಲ್ಲಿ ಗ್ರಾಮಕ್ಕೆ ತೆರಳಿ ಮತದಾರರ ಆಶೀರ್ವಾದವನ್ನ ಮತ್ತೊಮ್ಮೆ ಬೇಡಿ ಧನ್ಯವಾದವನ್ನ ಅರ್ಪಿಸುತ್ತಿದ್ದೇನೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದದ ಸಂಸದ ನಳೀನ್ ಕುಮಾರ್ ಕಟೀಲ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಉತ್ಸಾಹಕ್ಕೆ ಮಣಿದು ಇಂದು ಕುರ್ನಾಡು ಕ್ಷೇತ್ರದ್ಯಾಂತ ವಿಜಯೊತ್ಸವನ್ನ ಆಚರಿಸುತ್ತಿದ್ದೇವೆ. ಇಂತಹ ಅಭೂತಪೂರ್ವ ಗೆಲುವನ್ನಕ್ಕೊಟ್ಟ ಮತದಾರರಿಗೆ ಯಾವಾಗಲೂ ಚಿರರುಣಿ ಎಂದು ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ಸಂತೊಷ್ ಕುಮಾರ್ ಬೋಳಿಯಾರು ಹೇಳಿದರು. ವಿಜಯೋತ್ಸವದ ಮೆರವಣಿಗೆ ಮಂಜನಾಡಿ ವಿಷ್ಣು ಮೂರ್ತಿಕ್ಷೇತ್ರದಿಂದ ಹೊರಟು ,ಹೂ ಹಾಕುವ ಕಲ್ಲು, ಮುಡಿಪು ,ಬೋಳಿಯಾರು ಕುರ್ನಾಡು ಮಾರ್ಗವಾಗಿ ಕೊಣಾಜೆಯಲ್ಲಿ ಸಮಾರೊಪ ನಡೆಯಲಿದೆ.

Related posts

Leave a Reply

Your email address will not be published. Required fields are marked *