Header Ads
Breaking News

ಉಳ್ಳಾಲದ ಜನತೆಗೆ ಶುದ್ಧ ಕುಡಿಯುವ ನೀರು: 10 ಡಿಜಿಟಲ್ ವಾಟರ್ ಕಿಯೋಸ್ಕ್ ಆರಂಭ

ಉಳ್ಳಾಲ ನಗರ ಪ್ರದೇಶದ ಜನರಿಗೆ ಶುದ್ದ ಕುಡಿಯುವ ನೀರು ಉದ್ದೇಶದಿಂದ 80 ಲಕ್ಷ ರೂ ವೆಚ್ಚದಲ್ಲಿ 10 ಡಿಜಿಟಲ್ ವಾಟರ್ ಕಿಯೋಸ್ಕ್ ಆರಂಭಗೊಳ್ಳಲಿದ್ದು ಪ್ರಾರಂಭದ ಹಂತವಾಗಿ ಐದು ಘಟಕ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಚಾಲನೆ ನೀಡಲಾಗುವುದು ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.

ಉಳ್ಳಾಲ ಕೋಡಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ನಾನು ಆರೋಗ್ಯ ಸಚಿವರಾಗಿದ್ದಾಗ ಉಳ್ಳಾಲ ನಗರಸಭೆಯ ಅಭಿವೃದ್ದಿಗೆ 25 ಕೋಟಿ. ರೂ. ಬಿಡುಗಡೆ ಮಾಡಿದ್ದು, ಈ ನಿಧಿಯಡಿ ಇನ್ನೋಡಿ ಸಂಸ್ಥೆಯ ಸಹಯೋಗದೊಂದಿಗೆ 80 ಲಕ್ಷ ರೂ. ವೆಚ್ಚದಲ್ಲಿ 10 ಈ ಘಟಕ ಆರಂಭಗೊಳ್ಳಲಿದ್ದು ಉದ್ಘಾಟನೆಗೆ 5 ಘಟಕ ಸಿದ್ದಗೊಂಡಿದೆ ಎಂದ ಅವರು 10 ರೂ. 20ಲೀ ನೀರು ಕಾರ್ಡ್ ಅಥವಾ ಕಾಯಿನ್ ಹಾಕಿ ಪಡೆದುಕೊಳ್ಳಬಹುದು ಎಂದರು. ಇನ್ನೋಡಿ ಸಂಸ್ಥೆಯ ಮುಖ್ಯಸ್ಥ ಸುನಿಲ್ ಬಳ್ಳಾಲ್, ತಾಂತ್ರಿಕ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇನ್ನೋಡಿ ಸಂಸ್ಥೆಯ ಪ್ರಬಂದಕ ತಂಗದೊರೈ, ಕೌನ್ಸಿಲರ್ ಗಳಾದ ಭಾಝಿಲ್ ಡಿ.ಸೋಜಾ, ಯು.ಎ. ಇಸ್ಮಾಯಿಲ್ ವೀಣಾ ಡಿ. ಸೋಜ, ಭಾರತಿ ಎಂ. ಶಸಿಕಲಾ, ಇಬ್ರಾಹಿಂ ಅಶ್ರಫ್ ಆಯೂಬ್ ಮಂಚಿಲ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *