Header Ads
Header Ads
Breaking News

ಉಳ್ಳಾಲ: ಅಂತರರಾಷ್ಟ್ರೀಯ ಓರಲ್ ಮ್ಯಾಕ್ಸಿಲೋ ಸರ್ಜನ್ಸ್ ಡೇ-2019

ನಾಟೆಕಲ್ ಕಣಚೂರು ಆಸ್ಪತ್ರೆ ಮತ್ತು ಕ್ರೋನಿಫೇಶಿಯಲ್ ಅಸೋಸಿಯೇಷನ್ (ಕೆಐಸಿಎ) ವತಿಯಿಂದ 50 ನೇ ಅಂತರಾಷ್ಟ್ರೀಯ ಓರಲ್ ಮ್ಯಾಕ್ಸಿಲೋ ಸರ್ಜನ್ಸ್ ಡೇ-2019 ಯನ್ನು ರಸ್ತೆ ಸುರಕ್ಷತಾ ಜಾಗೃತಿ ಮೂಲಕ ಆಸ್ಪತ್ರೆಯಲ್ಲಿ ಆಚರಿಸಲಾಯಿತು.

ಕಣಚೂರು ಕ್ರೇನಿಯೋಫೇಷಿಯಲ್ ವಿಭಾಗದ ವೈದ್ಯಕೀಯ ನಿರ್ದೇಶಕ ಡಾ| ಮುಸ್ತಾಫ ಖಾದರ್ ಅತಿಥಿಗಳನ್ನು ಸ್ವಾಗತಿಸಿದರು.
ಎಒಎಂಎಸ್‍ಐ ಅಧ್ಯಕ್ಷ ಕೃಷ್ಣಮೂರ್ತಿ ಬೋಣಂತಾಯ ಮಾತನಾಡಿ, ರಸ್ತೆ ಸುರಕ್ಷತಾ ಜಾಗೃತಿ ಮೂಲಕ ಕಾರ್ಯಕ್ರಮವನ್ನು ಆಯೋಜಿಸಿರುವ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಅನೇಕ ಜೀವಗಳನ್ನು ಉಳಿಸಬಹುದು, ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು ಎಂದರು.

ಎಒಎಂಎಸ್ ಐ ಕಾರ್ಯದರ್ಶಿ ಡಾ| ಪ್ರೀತಂ ಶೆಟ್ಟಿ ರಸ್ತೆ ಸುರಕ್ಷತಾ ಜಾಗೃತ ಕ್ರಮಗಳ ಮಾಹಿತಿ ನೀಡಿದರು. ಕಣಚೂರು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ಡಾ| ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಈ ವೇಳೆ ಜಿಲ್ಲೆಯ ದಂತ ವೈದ್ಯಕೀಯ ಆಸ್ಪತ್ರೆಗಳ ಮೆಕ್ಸಿಲೋಫೇಷಿಯಲ್ ಸರ್ಜನ್ ಗಳು, ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

Related posts

Leave a Reply