Header Ads
Breaking News

ಉಳ್ಳಾಲ ನಗರಸಭೆಯ 16ನೇ ವಾರ್ಡು ಕೆರೆಬೈಲು- ಕಲ್ಲಾಪು ರಸ್ತೆ; ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲನ್ಯಾಸ ನೆರವೇರಿಸಿದ ಚಂದ್ರಹಾಸ್ ಪಂಡಿತ್ ಹೌಸ್

ರಸ್ತೆ ಡಾಮರೀಕರಣ ಬಿಡಿ, ಸುಸಜ್ಜಿತ ರಸ್ತೆಯೇ ಇಲ್ಲದ ಕೆರೆಬೈಲ್-ಕಲ್ಲಾಪು ರಸ್ತೆಯನ್ನು ಒಳಗೊಂಡ ಮಂಗಳೂರು ಕ್ಷೇತ್ರದ ಶಾಸಕರು ತಮ್ಮನ್ನು ತಾವು ಅಭಿವೃದ್ಧಿಯಲ್ಲಿ ನಂ.1 ಶಾಸಕರು ಎಂದು ಹೇಳುತ್ತಿರುವುದು ಖೇದಕರ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.

ಅವರು ಮಳೆಹಾನಿ ಪರಿಹಾರ ನಿಧಿಯಡಿ ಉಳ್ಳಾಲ ನಗರಸಭೆಯ 16ನೇ ವಾರ್ಡು ಕೆರೆಬೈಲು- ಕಲ್ಲಾಪು ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು. ಕನಿಷ್ಠ ನೀರಿನ ಪೈಪ್ಲೈನ್ ಕನೆಕ್ಷನ್ ಕೂಡಾ ಕೆರೆಬೈಲ್-ಕಲ್ಲಾಪು ರಸ್ತೆಯ ಜನರಿಗಿಲ್ಲ. ಡಾಮರೀಕರಣವೇ ಇಲ್ಲದ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುವ ರಸ್ತೆಯ ಅಭಿವೃದ್ಧಿ ಹೊಣೆಯನ್ನು ಸಂಸದರು ಹೊತ್ತಿದ್ದಾರೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದೆನ್ನುವ ಉದ್ದೇಶದಿಂದ ಬಿಜೆಪಿ ಕೆಲಸ ಮಾಡುತ್ತಿದೆ. ಇದೀಗ ಶಾಶ್ವತ ರಸ್ತೆಯನ್ನು ನಿರ್ಮಿಸಿ ಮುಂದಿನ ಹಂತದಲ್ಲಿ ಇತರೆ ರಸ್ತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಶಾಸಕ ಸ್ಥಾನಕ್ಕೆ ನಿಂತು ಸೋತರೂ ಸಂಸದರ ಮುಖೇನ ಕ್ಷೇತ್ರಕ್ಕೆ ಒಂದು ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದೇವೆ. ವಾರದಿಂದ ನಿರಂತರ ಶಿಲಾನ್ಯಾಸ ನಡೆದು ಕಾಮಗಾರಿಗಳು ಆರಂಭವಾಗಲಿದೆ. ಇಡೀ ಕ್ಷೇತ್ರ ಅಭಿವೃದ್ಧಿ ಆಗಿದೆ ಅನ್ನುತ್ತಾರೆ ಶಾಸಕರು, ಕ್ಷೇತ್ರದುದ್ದಕ್ಕೂ ತಾಯಂದಿರು ಕಣ್ಣೀರು ಹಾಕುವಂತಹ ಸ್ಥಿತಿ ಮಂಗಳೂರು ಕ್ಷೇತ್ರದಲ್ಲಿದೆ. ಇವೆಲ್ಲವನ್ನು ಮನಗಂಡು ಸಂಸದರ ನಿಧಿಯಲ್ಲಿ ಬಿಡುಗಡೆಗೊಂಡಿರುವ ಅನುದಾನವನ್ನು ಬೇಕಾದ ಕಡೆಗಳಲ್ಲಿ ವಿನಿಯೋಗಿಸಲಾಗುತ್ತಿದೆ ಎಂದರು.

ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ ಶಾಸಕರು ಶಿಲಾನ್ಯಾಸ ನಡೆಸುತ್ತಿದ್ದರೂ ಎಲ್ಲಿಯೂ ನಡೆದ ಕಾಮಗಾರಿಗಳ ಉದ್ಘಾಟನೆಗಳು ಆಗುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಎಲ್ಲಾ ಕಡೆಗಳಲ್ಲಿ ಜನ ಇದನ್ನೇ ಹೇಳುತ್ತಿರುವುದು ಗಮನಕ್ಕೆ ಬಂದಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದು, ಕ್ಷೇತ್ರದಲ್ಲಿ ತಮ್ಮದೇ ಅಭ್ಯರ್ಥಿ ಗೆಲ್ಲುತ್ತಿದ್ದಲ್ಲಿ ಶೇ.100 ಅಭಿವೃದ್ಧಿಯನ್ನು ನಡೆಸುತ್ತಿದ್ದರು. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿಗಳು ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದರು. ಈ ವೇಳೆ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಉಳ್ಳಾಲ ನಗರಸಭೆ ಸದಸ್ಯ ರಾಜೇಶ್ ಕೆರೆಬೈಲ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *