Header Ads
Header Ads
Header Ads
Breaking News

ಉಳ್ಳಾಲ ಸಯ್ಯದ್ ಮದನಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಸಂಗಮ ಸನ್ಮಾನ ಹಾಗೂ ಬೃಹತ್ ಮಿಲಾದ್ ಜಲ್ಸಾ ಕಾರ್ಯಕ್ರಮ

ಉಳ್ಳಾಲ ಜಮಾ‌ಅತ್ ಮತ್ತು ಸಯ್ಯದ್ ಮದನಿ ದರ್ಗಾ ಸಮಿತಿಯ ಅಂಗ ಸಂಸ್ಥೆಯಾದ ಸಯ್ಯದ್ ಮದನಿ ಸೋಷಿಯಲ್ ಫ್ರಂಟ್‌ನ ಆಶ್ರಯದಲ್ಲಿ ಉಳ್ಳಾಲದಲ್ಲಿ ನಡೆದ ಪ್ರತಿಭಾ ಸಂಗಮ, ಸನ್ಮಾನ ಕಾರ್ಯಕ್ರಮ ಮತ್ತು ಬೃಹತ್ ಮಿಲಾದ್ ಜಲ್ಸಾ ಕಾರ್ಯಕ್ರಮ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಿತು.

ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಸ್ಲಾಂನ್ನು ಲೋಕಕ್ಕೆ ಪ್ರಚಾರ ಮಾಡಿದ ಪ್ರವಾದಿವರ್ಯರ ಜನ್ಮದಿನವನ್ನು ನಾವು ಒಗ್ಗಟ್ಟಿನಿಂದ ಆಚರಿಸುವುದರ ಜತೆಗೆ ಅವರ ಬೋಧನೆಗಳನ್ನು ಅನುಕರಣೆ ಮಾಡಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಮಾತನಾಡಿ, ಕಾನೂನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಉಪಕಾರ ಮಾಡಿದವನಿಗೆ ಉಪಕಾರ ಮಾಡಬೇಕೇ ಹೊರತು ಅನ್ಯಾಯ ಮಾಡಬಾರದು ಎಂಬುದು ಪ್ರವಾದಿಯ ನುಡಿ. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಒಂದಾಗಿ ದರ್ಗಾ ಸೇವೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್‌ಬೋರ್ಡ್‌ನ ಅಧ್ಯಕ್ಷರಾದ ಕಣಚೂರು ಮೋನು, ಉಪಾಧ್ಯಕ್ಷರಾಗಿ ಆಯ್ಕೆಯಾದ ನೆಕ್ಕರೆ ಬಾವ, ಶಾಹುಲ್ ಹಮೀದ್, ಮೆಟ್ರೋ ಸದಸ್ಯರಾಗಿ ಆಯ್ಕೆಯಾದ ಯು.ಕೆ. ಮೋನು, ಇಸ್ಮಾಯಿಲ್ ಯು.ಎಸ್. ಅಬೂಬಕರ್, ಸುಲೈಮಾನ್ ಸಾಮಣಿಗೆ ಅವರನ್ನು ಸನ್ಮಾನಿಸಲಾಯಿತು.

ಪ್ರತಿಭಾ ಸಂಗಮ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಮುಖ ಭಾಷಣಗೈದರು

ಉಳ್ಳಾಲ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ನೆರವೇರಿಸಿದರು. ದರ್ಗಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹಾ, ಉಪಾಧ್ಯಕ್ಷ ಯುಕೆ. ಬಾವಾ ಮಹಮ್ಮದ್, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಮತ್ತಿತರರು ಉಪಸ್ಥಿತರಿದ್ದರು.

ವರದಿ: ಆರಿಫ್ ಕಲ್ಕಟ್ಟ, ಉಳ್ಳಾಲ

Related posts

Leave a Reply