Header Ads
Header Ads
Breaking News

ದೇರಳಕಟ್ಟೆಯ ಗೂಡಂಗಡಿಗಳ ತೆರವು ಕಾರ್ಯಾಚರಣೆ, ಬೆಳ್ಮ ಗ್ರಾಮ ಪಂಚಾಯತ್ ವತಿಯಿಂದ ಕಾರ್ಯಾಚರಣೆ

 

ರಸ್ತೆಬದಿಯಲ್ಲಿದ್ದ ಬೀದಿ ಬದಿ ವ್ಯಾಪಾರಸ್ಥರ ಮತ್ತು ಗೂಡಂಗಡಿಗಳ ತೆರವು ಕಾರ್‍ಯಾಚರಣೆ ಬೆಳ್ಮ ಗ್ರಾಮ ಪಂಚಾಯತ್ ವತಿಯಿಂದ ನಡೆಯಿತು. ಬೆಳ್ಮ ಪಂಚಾಯತ್ ಗೆ ಒಳಪಡುವ ದೇರಳಕಟ್ಟೆ ಜಂಕ್ಷನ್ನಿನ ರಸ್ತೆ ಬದಿಗಳಲ್ಲಿ ಹಲವು ವರ್ಷಗಳಿಂದ ಕಾರ್‍ಯಾಚರಿಸುತ್ತಿದ್ದ ಗೂಡಂಗಡಿಗಳ ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ಪಂಚಾಯತ್ ಆಡಳಿತ ಮುನ್ಸೂಚನೆ ನೀಡಿ ತೆರವುಗೊಳಿsಲಾಗಿದೆ.ಈ ವೇಳೆ ಅಂಗಡಿಗಳ ಕಾರ್‍ಯಾಚರಣೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇನ್ನು ಇದರ ಬಗ್ಗೆ ಪ್ರತಕ್ರಿಯೆ ನೀಡಿದ ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಪರಿಸರವನ್ನು ಸ್ವಚ್ಛ, ಸುಂದರವಾಗಿ ಮಾಡಬೇಕು ಅನ್ನುವ ಉದ್ದೇಶದಿಂದ ೧೫ ಬೀದಿ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ವಾಹನಗಳು ನಿಲ್ಲಲ್ಲು ಅಸಾಧ್ಯವಾಗುತಿತ್ತು. ಅದರಂತೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರಾಗಿಯೇ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಯಶಸ್ವಿ ಕಾರ್‍ಯಾಚರಣೆ ನಡೆದಿದೆ ಎಂದು ತಿಳಿಸಿದರು.

Related posts

Leave a Reply