Header Ads
Header Ads
Header Ads
Header Ads
Header Ads
Header Ads
Breaking News

ಎಂಆರ್‌ಪಿಎಲ್ ಪ್ರಾಯೋಜಿತ ಕಡಲಕೆರೆ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಮೂಡುಬಿದಿರೆ : ಶಿಕ್ಷಣ ಸಂಸ್ಥೆಗಳು ದೇವಸ್ಥಾನಗಳಿದ್ದಂತೆ. ದೇವಸ್ಥಾನಗಳಲ್ಲಿ ಎರಡು ಅಥವಾ ಮೂರು ಮೂರ್ತಿಗಳಿರಬಹುದು ಆದರೆ ಶಾಲೆ ಎಂಬ ದೇವಸ್ಥಾನದಲ್ಲಿ ಮಕ್ಕಳ ರೂಪದಲ್ಲಿ ಹಲವಾರು ಮೂರ್ತಿಗಳಿರುತ್ತವೆ. ಭೂಮಿಯ ಮೇಲಿರುವ ನಕ್ಷತ್ರಗಳು ಮಕ್ಕಳು ಅವರು ಬೆಳಗಲು ರಾಷ್ಟ್ರಭಕ್ತಿ ಬೇಕು. ಆಗ ದೇವರ ಬಗ್ಗೆ ಮತ್ತು ದೇಶದ ಬಗ್ಗೆ ಗೌರವ ಹೆಚ್ಚಾಗಲು ಸಾಧ್ಯವಿದೆ ಎಂದು ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಸೇವಾಂಜಲಿ ಎಜುಕೇಶನಲ್ ಟ್ರಸ್ಟ್, ಮೂಡುಬಿದಿರೆ ಆಡಳಿತಕ್ಕೊಳಪಟ್ಟಿರುವ ಸೈಂಟ್ ಇಗ್ನೇಶಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಡಲಕೆರೆಯಲ್ಲಿ ಎಂ.ಆರ್.ಪಿ.ಎಲ್ ಪ್ರಾಯೋಜಕತ್ವದಲ್ಲಿ1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.

ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಹಿತ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು. ಪ್ರೇರಣಾ ಸೇವಾ ಟ್ರಸ್ಟ್‌ನ ಅಧ್ಯಕ್ಷ, ಶಾಲಾ ಸಂಚಾಲಕ ಯಂ.ವಾಸುದೇವ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್, ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ವೆಂಕಟೇಶ ಎಂ, ಆರ್‌ಎಸ್‌ಎಸ್‌ನ ವಿಭಾಗ ಸಂಘ ಚಾಲಕ ಗೋಪಾಲ್ ಚೆಟ್ಟಿಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *