Header Ads
Header Ads
Breaking News

ಎಕ್ಕೂರು ದೀನ ಬಂಧು ದ್ವಿತೀಯ ವರ್ಷ ಪಾದಾರ್ಪಣೆ : ಮನಪಾ ಕಾರ್ಪೊರೇಟರ್‌ಗಳಿಗೆ ಅಭಿನಂದನಾ ಸಮಾರಂಭ

ಉಳ್ಳಾಲ: ಕೊಂಕಣಿ, ಬ್ಯಾರಿ ಭಾಷೆ ಮಾತನಾಡುವವರು ತುಳು ಭಾಷೆಯನ್ನು ಎರಡನೇ ಭಾಷೆಯಾಗಿರಿಸಿಕೊಂಡು ಸರಕಾರದ ಗಮನಹರಿಸುವ ಕಾರ್ಯ ಮಾಡಬೇಕಿದೆ. ಈ ಮೂಲಕ ಜನಸಂಖ್ಯೆ ಆಧಾರದಲ್ಲಿ ತುಳು ಭಾಷೆ ಗೆ ಅಧಿಕೃತ ಮಾನ್ಯತೆ ಸಿಗಲು ಸಾಧ್ಯ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅಭಿಪ್ರಾಯಪಟ್ಟರು. ಹಿಂದೂ ಯುವ ಸೇನೆ ಓಂ ಶಕ್ತಿ ಶಾಖೆ, ಹಿಂದೂಪುರ ಎಕ್ಕೂರು ಆಶ್ರಯದಲ್ಲಿ ದೀನ ಬಂಧುವಿನ ದ್ವಿತೀಯ ವರ್ಷದ ಪಾದಾರ್ಪಣೆ ಹಾಗೂ ನೂತನವಾಗಿ ಆಯ್ಕೆಯಾದ ಮನಪಾ ಕಾರ್ಪೊರೇಟರ್ ಗಳಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭ ಹಿಂದೂ ಯುವಸೇನೆ ಮುಖಂಡ ಶುಭಕರ ಶೆಟ್ಟಿ ಹಿಂದೂ ಯುವಸೇನೆ ಮುಖಂಡ ಶ್ರೀನಿವಾಸ್ ಎಕ್ಕೂರು, ಎಕ್ಕೂರು ಘಟಕದ ಪ್ರಮುಖರುಗಳಾದ ಭರತ್ ಶೆಟ್ಟಿ, ಪ್ರಶಾಂತ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *