Header Ads
Header Ads
Breaking News

ಎಜೆ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ:ಅಂಗಾಂಗದಾನ ಮಾಡಿದವರಿಗೆ ಸನ್ಮಾನ

ಮಂಗಳೂರಿನ ಕುಂಟಿಕಾನದಲ್ಲಿರುವ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ಕಿಡ್ನಿ ಹೆಲ್ತ್ ಫಾರ್ ಎವ್ರಿವನ್ ಎವ್ರಿವೇರ್ ವಿಶೇಷ ಕಾರ್ಯಕ್ರಮವು ಎಜೆಹೆಚ್‌ಆರ್‌ಸಿ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಿತು. ಎಜೆಹೆಚ್‌ಆರ್‌ಸಿ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಡೀನ್ ಡಾ. ಅಶೋಕ್ ಹೆಗ್ಡೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಎಜೆ ಆಸ್ಪತ್ರೆಯ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲ ಅವರು ಕಿಡ್ನಿ ಸಮಸ್ಯೆಗಳ ಅರಿವಿಗಾಗಿ ಕಿಡ್ನಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಿಡ್ನಿ ನಮ್ಮ ದೇಹದ ಮುಖ್ಯವಾದ ಅಂಗ. ಆದರೆ ಅದು ವೈಫಲ್ಯವಾದರೆ ಇತ್ತೀಚಿನ ದಿನಗಳಲ್ಲಿ ಹೆದರಬೇಕಾದ ಅವಶ್ಯಕತೆ ಇಲ್ಲ. ಕಿಡ್ನಿ ಕಸಿಯನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಆನಂತರ ಕಿಡ್ನಿ ಕಸಿ ಮಾಡಿಸಿಕೊಂಡ ಸುನೀಲ್ ಹೆಗ್ಡೆ ಅವರು ಮಾತನಾಡಿ, ಕಿಡ್ನಿ ಕಸಿ ಮಾಡಿಸಿಕೊಳ್ಳುವುದರಿಂದ ಯಾವುದೇ ಅಪಾಯವಿಲ್ಲ. ಕಿಡ್ನಿ ಪೈಲ್ಯೂರ್ ಆದರೆ ಕಸಿ ಮಾಡಿಕೊಳ್ಳುವ ಮೂಲಕ ಸರಿಪಡಿಸಿಕೊಳ್ಳಬಹುದು ಎಂದು ಹೇಳಿದರು.
ಇದೇ ವೇಳೆ ಅಂಗಾಂಗ ದಾನ ಮಾಡಿದ ವ್ಯಕ್ತಿಗಳನ್ನು ಎಜೆ ಆಸ್ಪತ್ರೆಯ ವತಿಯಿಂದ ಗೌರವಿಸಲಾಯಿತು.ಈ ಸಂದರ್ಭ ಕಾರ್ಯಕ್ರಮದಲ್ಲಿ ಎಜೆ ಆಸ್ಪತ್ರೆಯೆ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಸಚ್ಚಿದಾನಂದ, ಡಾ. ಎಸ್. ಪಿ. ಶೆಣೈ, ಡಾ. ಪ್ರೀತಮ್ ಧರ್ಮ, ಅಂಗಾಂಗ ದಾನಿ ಹರಿಕೃಷ್ಣ ಎಮ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *