Header Ads
Header Ads
Breaking News

ಟೋಲ್‌ಗೇಟ್ ಪ್ರತಿಭಟನೆಯಲ್ಲಿ ಮಿಥುನ್ ರೈ ಹೇಳಿಕೆಗೆ ಬಿಜೆಪಿ ಖಂಡನೆ

ಸುರತ್ಕಲ್‌ನ ಅಕ್ರಮ ಟೋಲ್‌ಗೇಟ್ ವಿಚಾರ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗ್ತಾ ಇದೆ. ಗುತ್ತಿಗೆ ಕಂಪೆನಿಯು ಇಂದಿನಿಂದ ಸ್ಥಳೀಯ ವಾಹನಗಳಿಂದಲೂ ಒಂದು ಬಾರಿಗೆ ೨೫ರೂ. ನಂತೆ ವಸೂಲಿ ಮಾಡುವ ಕ್ರಮವನ್ನು ಕೈಗೊಂಡಿತ್ತು. ಈ ವಿಚಾರವಾಗಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಬಾರೀ ವಿರೋಧವನ್ನು ವ್ಯಕ್ತಪಡಿಸಿದ್ದು, ಇಂದು ಪ್ರತಿಭಟನೆ ನಡೆಸಿತು. ಈ ಬಗೆಗಿನ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ..


ಎನ್‌ಐಟಿಕೆ ಟೋಲ್ ಗೇಟ್ ನಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ವಿಧಿಸಬಾರದೆಂದು ಅಗ್ರಹಿಸಿ ವಿವಿಧ ಪಕ್ಷಗಳ ಮತ್ತು ನಾಗರಿಕ ಸಂಘಟನೆಗಳ ಮುಖಂಡರು ನೀಡಿದ ಮನವಿಯನ್ನು ಪುರಸ್ಕರಿಸಿರುವ ಜಿಲ್ಲಾಧಿಕಾರಿಗಳು, ಸುಂಕ ವಸೂಲಿ ಕ್ರಮಕ್ಕೆ ಮೂರು ದಿನಗಳ ಕಾಲ ತಾತ್ಕಾಲಿಕ ತಡೆ ನೀಡಿದ್ದಾರೆ. ಈಕಾರಣ ಇಂದಿನಿಂದ ಸ್ಥಳೀಯ ವಾಹನಗಳಿಂದಲೂ ಒಂದು ಬಾರಿಗೆ 25 ರೂ. ನಂತೆ ವಸೂಲು ಮಾಡುವ ಕ್ರಮವನ್ನು ಗುತ್ತಿಗೆ ವಹಿಸಿಕೊಂಡ ಕಂಪೆನಿ ಕೈಬಿಟ್ಟಿದೆ. ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಪ್ರತಿಭಟನೆ ನಡೆಸುವ ಸನಿಹದಲ್ಲೇ ಬಿಜೆಪಿಗರೂ ಕೂಡ ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಇನ್ನು ಇಂದು ಮುಂಜಾನೆಯೇ ಟೋಲ್‌ಗೇಟ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಕ್ರಮ ಟೋಲ್ ವಸೂಲಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಸ್ಥಳೀಯ ವಾಹನಗಳಿಂದ ಪೊಲೀಸ್ ರಕ್ಷಣೆಯಲ್ಲಿ ಸುಂಕ ಸಂಗ್ರಹದ ವಿರುದ್ಧದ ಹೋರಾಟಕ್ಕೆ ನಮಗೆ ತಾತ್ಕಾಲಿಕ ಜಯ ಸಿಕ್ಕಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಧ್ಯಪ್ರವೇಶದಿಂದಾಗಿ ಬಲವಂತದ ಟೋಲ್ ಸಂಗ್ರಹಕ್ಕೆ ಅವಕಾಶವನ್ನು ಜಿಲ್ಲಾಡಳಿತ ನಿರಾಕರಿಸಿರುವುದು ಶ್ಲಾಘನೀಯ. ಮುಂದಿನ ಆದೇಶದವರಗೆ ಯಥಾಸ್ಥಿತಿ ಕಾಪಾಡಲು ಟೋಲ್ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಸೂಚಿಸಿದೆ ಎಂದರು.

ಇನ್ನು ಯುವ ಘಟಕ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಬಿಜೆಪಿಯವರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಾಕುವಂತಹ ಕೆಲಸ ಮಾಡ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಬಿ.ಕೆ.ಇಮ್ತಿಯಾಝ್, ಹರೀಶ್ ಪುತ್ರನ್, ವಸಂತ ಬೆರ್ನಾಡ್, ಧನಂಜಯ ಮಟ್ಟು, ಪುರುಷೋತ್ತಮ ಚಿತ್ರಾಪುರ, ರೇವತಿ ಪುತ್ರನ್ ಮತ್ತಿತರರು ಹಾಜರಿದ್ದರು.
ಒಟ್ಟಿನಲ್ಲಿ ಅದೇಷ್ಟೋ ಪ್ರತಿಭಟನೆ ನಡೆಸಿರುವ ಹೋರಾಟ ಸಮಿತಿಯವರ ಮನವಿಗೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ಶುಲ್ಕ ಸಂಗ್ರಹಕ್ಕೆ ತಡೆ ನೀಡಿದೆ. ಆದರೆ ಮುಂದೊಂದು ದಿನ ಎನ್‌ಐಟಿಕೆ ಟೋಲ್‌ಗೆಟ್ ಸ್ಥಳೀಯ ವಾಹನ ಸವಾರರಿಗೆ ಹೊರೆಯಾಗಲಿರುವುದಂತು ಸತ್ಯ. ಈ ಬಗ್ಗೆ ಕೂಡಲೇ ಹೆದ್ದಾರಿ ಇಲಾಖೆ ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.


Related posts

Leave a Reply

Your email address will not be published. Required fields are marked *