Header Ads
Breaking News

ಎಪ್ರಿಲ್ 26ರಂದು ಬಹರೈನ್‌ನಲ್ಲಿ ಬೆಳ್ಳಿ ಪರದೆಯಲ್ಲಿ ವಿಜೃಂಭಿಸಲಿದೆ ದೇಯಿ ಬೈದತಿ

ದ್ವೀಪ ರಾಷ್ಟ್ರ ಬಹರೈನ್‍ನಲ್ಲಿ ತುಳು ಚಿತ್ರವೊಂದು ಬೆಳ್ಳಿ ಪರದೆ ಮೇಲೆ ವಿಜೃಂಣಿಸಲಿದೆ. ದೇಯಿ ಬೈದತಿ ತುಳು ಚಿತ್ರವು ದ್ವೀಪ ರಾಷ್ಟ್ರ ಬಹರೇನ್‍ನಲ್ಲಿ ಏಪ್ರಿಲ್ 26 ರ ಶುಕ್ರವಾರ ಸಂಜೆ 3 ಘಂಟೆಗೆ ಮನಮದಲ್ಲಿರುವ ಅಲ್ ಹಮ್ರಾ ಸಿನಿಮಾ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಾಣಲಿದೆ.

ಈ ಚಿತ್ರದ ಟಿಕೆಟ್ ಬಿಡುಗಡಾ ಸಮಾರಂಭವು ಇತ್ತೀಚೆಗೆ ಇಲ್ಲಿನ ಪ್ಯಾಪಿಲಾನ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ನೆರವೇರಿತು. ಇಲ್ಲಿನ ಕರ್ನಾಟಕ ಮೂಲದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಬಹರೈನ್ ಬಿಲ್ಲವಾಸ್ ನ ಸದಸ್ಯರು ಹಾಗು ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವೇದಿಕೆಯಲ್ಲಿ ಉಪಸ್ಥಿತರಿದ್ದ ಬಹರೇನ್ ಬಿಲ್ಲವಾಸ್ ನ ಅಧ್ಯಕ್ಷರಾದ ಶ್ರೀ ಸುರೇಂದ್ರ ಉದ್ಯಾವರ್ ,ಬಹರೇನ್ ಬಿಲ್ಲವಾಸ್ ನ ಮಾಜಿ ಪ್ರಧಾನ ಕಾರ್ಯದರ್ಶಿಗಳಾದಂತಹ ಶ್ರೀ ಹರೀಶ್ ಜತ್ತನ್ನ ,ಹಿರಿಯ ಕನ್ನಡಿಗ ಶ್ರೀ ಸುಧಾಕರ್ ಶೆಟ್ಟಿ,ಆಸ್ಟಿನ್ ಸಂತೋಷ್ ಮುಂತಾದವರು ಟಿಕೇಟನ್ನು ಅನಾವರಣಗೊಳಿಸಿ ನೆರೆದವರಿಗೆ ವಿತರಿಸಿ ಮಾತನಾಡಿ ಶುಭ ಹಾರೈಸಿದರು .

ಸಂಶೋಧಕರಾದ ಬನ್ನಂಜೆ ಬಾಬು ಅಮೀನ್, ದಾಮೋದರ್ ಕಲ್ಮಾಡಿ, ಡಾ||ಗಣನಾಥ್ ಶೆಟ್ಟಿ ಎಕ್ಕಾರ್, ಚೆಲುವಾರಾಜ್ ಪೆರಂಪಳ್ಳಿ, ಬಾಬುಶಿವಪೂಜಾರಿ ಮುಂಬೈ, ಇಂತಹ ಮೇರು ಸಂಶೋಧಕರ ಆಲೋಚನೆಯ ಅರವಿನಲ್ಲಿ ಮೂಡಿಬಂದ ತುಳುನಾಡಿಗರ ರೋಚಕ ಇತಿಹಾಸವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ತುಳು ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಅದ್ಭುತವಾಗಿ ನಿರ್ಮಾಣಗೊಂಡ ಚಿತ್ರವೆಂದು ಭಾರಿ ಮೆಚ್ಚುಗೆ ವ್ಯಕ್ತಪಡಿಸಿ “ಯು” ಪ್ರಮಾಣಪತ್ರವನ್ನು ನೀಡಿದೆ…

2ಗಂಟೆ 50 ನಿಮಿಷಗಳ ಕಾಲ ಪ್ರೇಕ್ಷಕರನ್ನು 500ವರ್ಷಗಳ ಹಿಂದಕ್ಕೆ ಕೊಂಡೊಯ್ಯುದು ಚಿಂತನೆಗೆ ಈಡು ಮಾಡುವ ಈ ಚಿತ್ರವು ತಮ್ಮ ತಮ್ಮ ತಾಯಂದಿರ ತ್ಯಾಗಮಯ ಬದುಕನ್ನು ನೆನೆದು ಬಿಗಿದಪ್ಪಿ ರೋದಿಸುತ್ತಾ,ಯುವ ಪೀಳಿಗೆ ಜೀವನದ ಮಾರ್ಗದರ್ಶನವನ್ನು ನೀಡಲಿದೆ. ಕನ್ನಡ, ತಮಿಳು,ತುಳು ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಕಾಲ ದುಡಿದು ಅನುಭವ ಹೊಂದಿರುವ ಸೂರ್ಯೋದಯ್ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಲನಚಿತ್ರ ಇದು.

ಈ ಚಿತ್ರಕ್ಕಾಗಿ 500 ವರ್ಷಗಳ ಹಿಂದಿನ ಕಾಲಕ್ಕೆ ಸರಿಹೊಂದುವ ಭವ್ಯ ಮನೆಗಳ ಸೆಟ್’ಗಳನ್ನು ನಿರ್ಮಿಸಲಾಗಿ. ಆ ಕಾಲದ ಕರ್ನಾಟಕ ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು,ತುಳು ನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ. ಲಕ್ಷ್ಮಣ ಕೆ. ಅಮೀನ್ ಅರ್ಪಿಸುವ ಸಂಕ್ರಿ ಮೋಷನ್ ಪಿಕ್ಚರ್ ಬ್ಯಾನರ್‍ನಲ್ಲಿ ತಯಾರಾದ ಈ ಚಿತ್ರಕ್ಕೆ ದೇವ್’ರಾಜ್ ಪಾಲನ್, ರಾಜ್’ಕೃಷ್ಣ,ಅಮಿತ್’ರಾವ್’ರವರ ಸಹ ನಿರ್ದೇಶನವಿದ್ದು ಸಂಜೀವ ಪೂಜಾರಿ ಹೆರ್ಗ, ಕಿರಣ್ ಹೆಗ್ಡೆ ಬಿಜ್ರಿಯವರ ನಿರ್ಮಾಣ ನಿರ್ವಹಣೆಯಿದೆ.

ಈ ಚಿತ್ರದಲ್ಲಿ ಕಂಚಿನ ಕಂಠವೆಂದೇ ಖ್ಯಾತಿ ಪಡೆದ ಕರಾವಳಿಯ ಕಲಾವತಿ ದಯಾನಂದ್’ರವರ ಜೊತೆಗೆ ಸೂರ್ಯೋದಯ್ ಪೆರಂಪಳ್ಳಿ,ಲಹರೀ ಕೋಟ್ಯಾನ್, ಸುರೇಶ್ ಸಾಲ್ಯಾನ್,ಕಾಲೇಶ್’ರವರ ಹಿನ್ನೆಲೆ ಗಾಯನವಿದೆ. ಃ.ಭಾಸ್ಕರ್ ರಾವ್ ಸಂಗೀತ,ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ ಮತ್ತು ಹರೀಶ್ ಪೂಜಾರಿ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್ ಎಲ್ ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ರವಿ ಪೂಜಾರಿ ಹಿರಿಯಡ್ಕ,ಹಾಗೂ ದಿನೇಶ್ ಸುವರ್ಣ ರಾಯಿರವರು ಕಲಾ ನಿರ್ದೇಶಕರಾಗಿ ಅದ್ಭುತವಾಗಿ ತಮ್ಮ ಕೈಚಳಕ ತೋರಿದ್ದಾರೆ.ಉಮೇಶ್ ಪೂಜಾರಿ ಬೆಳ್ತಂಗಡಿ ಸಹನಿರ್ಮಾಪಕರಾಗಿದ್ದು.ಈ ಚಿತ್ರದ ಸಾಹಿತ್ಯ,ಚಿತ್ರಕಥೆ,ಸಂಭಾಷಣೆ, ನಿರ್ಮಾಣ ಹಾಗೂ ನಿರ್ದೇಶನವನ್ನು ಸೂರ್ಯೋದಯ್ ಪೆರಂಪಳ್ಳಿರವರೇ ನಿರ್ವಹಿಸಿದ್ದಾರೆ.

Related posts

Leave a Reply

Your email address will not be published. Required fields are marked *