

ಕೊರೋನಾದ ಕರಿನೆರಳಿನ ಅಡಿಯಲ್ಲಿ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಎರಡನೇ ಸುತ್ತಿನ ಹಾಗೂ ಕೊನೆಯ ಹಂತದ ಮತದಾನ ಕಾರ್ಕಳ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಬೆಳಗಿನ ಹೊತ್ತು ಮಂದಗತಿಯಲ್ಲಿ ಸಾಗಿದ್ದು, 10 ಗಂಟೆ ನಂತರ ಬಿರುಸಿನ ವೇಗ ಪಡೆಯಿತು. ಸುಮಾರು 35% ಮತದಾನ ಆಗಿದ್ದು. ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಮತದಾರರು ಹೆಚ್ಚಿನ ಮತ ಚಲಾಯಿಸಿದ್ದು ಕಂಡುಬಂತು. ಎಲ್ಲ ಮತಗಟ್ಟೆಗಳಲ್ಲಿ ದೇಹದ ಉಷ್ಣತೆಯನ್ನು ಪರೀಕ್ಷಿಸಿ ಮಾಸ್ಕ್ ಕಡ್ಡಾಯಗೊಳಿಸಿ ಮತದಾರರನ್ನು ಮತ ಚಲಾಯಿಸಲು ಬಿಡಲಾಯಿತು. ಇನ್ನು ಮಧ್ಯಾಹ್ನದ ಹೊತ್ತಿಗೆ ಮತದಾನ ಪ್ರಕ್ರಿಯೆಯು ತೀವ್ರ ಕಾವು ಪಡೆದುಕೊಂಡಿದೆ. ಈಗಾಗಲೆ ಕಾರ್ಕಳ ತಾಲೂಕಿನಲ್ಲಿ 45% ಮತದಾನದ ವರದಿಯಾಗಿದೆ. ಪಕ್ಷ ಕಾರ್ಯಕರ್ತರು ತಮ್ಮ ಪಕ್ಷದ ಮತದಾರನ್ನು ಕರೆತಂದು ಮತ ಹಾಕಿಸುವುದು ಕಂಡುಬಂತು. ಎಲ್ಲೆಡೆಯೂ ಮಹಿಳಾ ಮತದಾರರು ಮತ ಚಲಾಯಿಸುವುದು ಸಾಮಾನ್ಯವಾಗಿ ಕಂಡುಬಂತು.