Header Ads
Breaking News

ಎರ್ಮಾಳು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ : ಅಧಿಕಾರಿ ನಿರ್ಲಕ್ಷ್ಯಕ್ಕೆ ಜನ ಕತ್ತಲಲ್ಲಿ

ಎರ್ಮಾಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಈ ಬಗ್ಗೆ ಪಡುಬಿದ್ರೆ ಮೆಸ್ಕಾಂ ಅಧೀಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅವರನ್ನ ತಕ್ಷಣವೇ ವರ್ಗಾಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವೈ. ಬಾಲಚಂದ್ರ ಅವರು, ಸುಧೀರ್ ಪಾಟೇಲ್ ಎಂಬವರು ಪಡುಬಿದ್ರಿ ವ್ಯಾಪ್ತಿಯ ಮೆಸ್ಕಾಂ ಕಛೇರಿಯ ಜವಾಬ್ದಾರಿ ವಹಿಸಿಕೊಂಡ ಬಳಿಕ ನಿರಂತರ ವಿದ್ಯುತ್ ಸಮಸ್ಯೆ ತಲೆದೂಗಿದ್ದು, ಈ ಹಿಂದಿನ ಅಧಿಕಾರಿಗಳಾದ ರಾಘವೇಂದ್ರ, ಪ್ರಾಣೇಶ್, ಸತೀಶ್ ಎಂಬವರು ಅತ್ಯುತ್ತಮವಾಗಿ ನಿರ್ವಾಹಿಸಿಕೊಂಡು ಬಂದಿದ್ದ ಲೈನ್‌ಗಳನ್ನು ನಿರ್ವಾಹಣೆ ಮಾಡದೆ, ನಿರ್ಲಕ್ಷ್ಯ ಮಾಡಿದ್ದರಿಂದ ಇದೀಗ ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಬಹುತೇಕ ಲೈನ್‌ಗಳು ಕುಲಗೆಟ್ಟು ಹೋಗಿದೆ.

ಎರ್ಮಾಳು ವ್ಯಾಪ್ತಿಯಲ್ಲಂತ್ತೂ ಹೈಟೆಕ್ಷನ್ ಕೇಬಲ್‌ಗಳು ಆಗಲೋ ಈಗಲೋ ಧರೆಗುರುಳುವ ಮಟ್ಟದಲ್ಲಿದ್ದು, ಕಂಬದಲ್ಲಿನ ಬಿಡಿಭಾಗಗಳನ್ನು ಬೇರೊಂದು ತಂತಿಗಳಿಂದ ಎಳೆದು ಕಟ್ಟಿದ್ದು, ಅದು ಜೋತು ಬಿದ್ದಿದೆ. ಬ್ರೀಟಿಷ್‌ರ ಕಾಲದ ಉಕ್ಕಿನ ಕಂಬಗಳು ನಿವೃತ್ತಿಯ ಅಂಚಿನಲ್ಲಿದ್ದರೂ ಅಧಿಕಾರಿಯ ನಿರ್ಲಕ್ಷದಿಂದ ಬದಲಾವಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಬೇಸಿಗೆ ಕಾಲದಲ್ಲಿ ಈ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ನೆರೆ ಪ್ರದೇಶವಾದ ಈ ಗದ್ದೆಗೆ ತಂತಿ ಏನಾದರೂ ಕಡಿದು ಬಿದ್ದರೆ ಪ್ರಾಣ ಹಾನಿ ಕಟ್ಟಿಟ್ಟ ಬುತ್ತಿ. ಅದಲ್ಲದೆ ಸ್ಥಳೀಯ ಬಬ್ಬಸ್ವಾಮಿ ದೈವಸ್ಥಾನದ ಬಳಿಯ ಟ್ರಾನ್ಸ್‌ಪಾರ್ಮಾರ್ ಕೆಟ್ಟು ಹೋಗಿ ಹತ್ತು ದಿನ ಕಳೆದರೂ ಈ ವರೆಗೂ ಅದನ್ನು ಬದಲಿಸಿಲ್ಲ, ಈ ಅಧಿಕಾರಿಯ ಅದೆಷ್ಟೋ ನಿರ್ಲಕ್ಷ್ಯದ ವಿರುದ್ಧ ಈ ಹಿಂದೆಯೂ ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಆ ಅಧಿಕಾರಿಯನ್ನು ವರ್ಗಾಹಿಸುವಂತೆ ಆಗ್ರಹಿಸಿದಾಗ ಸ್ಥಳಕ್ಕೆ ಆಗಮಿಸಿದ ಮೇಲಾಧಿಕಾರಿಗಳು ಮುಂದಿನ ದಿನದಲ್ಲಿ ಸಮಸ್ಯೆ ನೀಗಿಸುವ ಭರವಸೆ ವ್ಯಕ್ತ ಪಡಿಸಿದ್ದರಾದರೂ, ಆ ಅಧಿಕಾರಿಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಕೇವಲ ಬಿಲ್ಲ್ ಸಂಗ್ರಹಕ್ಕೆ ಒತ್ತು ನೀಡುವುದು ಬಿಟ್ಟರೆ ತನ್ನ ಕರ್ತವ್ಯ ಮರೆತಿರುವ ಈ ಅಧಿಕಾರಿಯನ್ನು ತಕ್ಷಣ ವರ್ಗಾಹಿಸಿರಿ ಇಲ್ಲವಾದರೇ ಗ್ರಾಮಸ್ಥರಾದ ನಾವೆಲ್ಲ ಸೇರಿ ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಎರ್ಮಾಳು ಗ್ರಾಮಸ್ಥರಿಗೆ ವಿದ್ಯುತ್ ಸಮಸ್ಯೆಯಿಂದ ತೊಂದರೆಯಾಗ್ತಾ ಇದ್ದು ತಕ್ಷಣ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *