Header Ads
Breaking News

ಎರ್ಮಾಳು ನಾರಾಯಣ ಗುರು ಮಂದಿರದಲ್ಲಿ ಕಳವು

ಎರ್ಮಾಳು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಬಾಗಿಲು ಮುರಿದ ಕಳ್ಳರು ಸುಮಾರು ಐವತ್ತು ಸಾವಿರ ರೂ ಬೆಲೆ ಬಾಳುವ ಗುರುಗಳ ಬೆಳ್ಳಿಯ ಪಾದುಕೆ ಕಳವು ಮಾಡಿದ ಘಟನೆ ಮುಂಜಾನೆ ಬೆಳಕಿಗೆ ಬಂದಿದೆ.

ಮುಂಜಾನೆ ಮಂದಿರದಲ್ಲಿ ಪೂಜೆ ನಡೆಸಲು ಬಂದ ಅರ್ಚಕರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಮುಂಬಾಗಿ ಮುರಿದು ಗರ್ಭಗುಡಿಯ ಚಿಲಕ ಮುರಿದು ಜಾಲಾಡಿದ ಕಳ್ಳರು ಬೃಹತ್ ಕಾಣಿಕೆ ಹುಡಿಯನ್ನು ಒಡೆಯಲು ವಿಫಲ ಯತ್ನ ನಡೆಸಿದ್ದಾರೆ. ಅದು ಅಸಾಧ್ಯವಾದಾಗ ಗರ್ಭ ಗುಡಿಯ ಒಳಗಿದ್ದ ಬೆಳ್ಳಿ ಪಾದುಕೆ ಕಳವು ನಡೆಸಿ ಪರಾರಿದ್ದಾರೆ. ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇಲ್ಲಿ ಒಂದೇ ಕಡೆಯಲ್ಲಿ ಈ ಕೃತ್ಯ ನಡೆಸಿದ್ದಾರೆಯೇ ಇಲ್ಲ ಸರಣಿ ಕಳ್ಳತನ ನಡೆಸಿದ್ದಾರೆ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ.

Related posts

Leave a Reply

Your email address will not be published. Required fields are marked *