Header Ads
Breaking News

ಎರ್ಮಾಳು :ಮುಳ್ಳುಪೊದೆಯಲ್ಲಿ ಸಿಲುಕಿದೆ ಮೆಸ್ಕಾಂ ಟ್ರಾನ್ಸ್‌ಪಾರ್ಮಾರ್.

ಬಡಾ ಎರ್ಮಾಳು ಮೀನುಗಾರಿಕಾ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮೆಸ್ಕಾಂನ ಟ್ರಾನ್ಸ್‌ರ್ಪಾಮಾರ್, ಒಂದು ಕಡೆ ಮುಳ್ಳು ಪೊದೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ ಮತ್ತೊಂದು ಕಡೆ ವಿದ್ಯುತ್ ತಂತಿಗಳು ಬಳ್ಳಿಯ ಅಲಂಕಾರದೊಂದಿಗೆ ಅಪಾಯದ ಸೂಚನೆ ನೀಡುತ್ತಿದ್ದರೂ, ಪಡುಬಿದ್ರಿ ಮೆಸ್ಕಾಂ ಮೌನವಾಗಿದೆ.ಈ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ಸ್ಥಳೀಯ ಮಹಿಳೆಯೋರ್ವರು ಬಡಾ ಎರ್ಮಾಳಿನ ಮೀನುಗಾರಿಕಾ ಅಂಚಿನಲ್ಲೇ ಈ ಟ್ರಾನ್ಸ್‌ರ್ಪಾಮಾರ್ ಬಹಳಷ್ಟು ಹಿಂದಿನಿಂದಲೂ ಯಾವುದೇ ನಿರ್ವಾಹಣೆ ಇಲ್ಲದೆ ಕಾರ್ಯಾಚರಿಸುತ್ತಿದೆ, ಇದೀಗ ಮುಳ್ಳುಪೊದೆಗಳು ಆ ಟ್ರಾನ್ಸ್‌ರ್ಪಾಮಾರನ್ನು ಸುತ್ತುವರಿದಿದ್ದು, ಅಲ್ಲದೆ ಬಳ್ಳಿಗಳು ವಿದ್ಯುತ್ ತಂತಿಗಳನ್ನು ಆವರಿಸಿಕೊಂಡು ಈ ಪ್ರದೇಶ ಅಪಾಯಕಾರಿ ಎಂಬುದನ್ನು ಸಾರಿ ಹೇಳುವಂತ್ತಿದೆ. ಪಕ್ಕದಲ್ಲೇ ಬಾರೊಂದು ಕಾರ್ಯಾಚರಿಸುತ್ತಿದ್ದು ಕುಡಿದ ಮತ್ತಿನಲ್ಲಿ ಆ ಅಪಾಯಕಾರಿ ಪ್ರದೇಶ ಪ್ರವೇಶಿಸಿದರೆ ಗಂಡಾಂತರ ತಪ್ಪಿದ್ದಲ್ಲ, ಮತ್ತೊಂದು ಕಡೆ ಸಿಗರೇಟು ಸೇವಿಸಿ ಆ ಭಾಗದಲ್ಲಿ ಬೀಸಾಕಿದರೆ ಬೆಂಕಿ ಉಂಟಾಗಿ ಟ್ರಾನ್ಸ್‌ರ್ಪಾಮಾರ್ ಉರಿದು ಸ್ಫೋಟಗೊಂಡು ಅಪಾಯ ಸಂಭವಿಸಿದರೂ ಆಶ್ಚರ್ಯವಿಲ್ಲ.

Related posts

Leave a Reply

Your email address will not be published. Required fields are marked *