Breaking News

ಎಲ್ಲಾ ಧರ್ಮಗಳ ಹಬ್ಬ ಹರಿದಿನಗಳು ಸುಸೂತ್ರವಾಗಿ ನಡೆಯಲಿ, ಪಡುಬಿದ್ರಿ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಎಸ್ಸೈ ಸತೀಶ್

ಪಡುಬಿದ್ರಿ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುತ್ತದೆ ಎಂಬುದಕ್ಕೆ ಈ ಶಾಂತಿ ಸಭೆಯನ್ನು ನಡೆಸುತ್ತಿಲ್ಲ. ಮೇಲಾಧಿಕಾರಿಗಳ ಸೂಚನೆಯಂತೆ ನಡೆಸುತ್ತಿದ್ದೇವೆ, ಎಲ್ಲಾ ಧರ್ಮಗಳಲ್ಲೂ ಹಬ್ಬಹರಿದಿನಗಳು ಬರುತ್ತಿದೆ. ಎಲ್ಲರೂ ತಮ್ಮ ಧರ್ಮಗಳಿಗೆ ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಿದ್ದು ಅದಕ್ಕೆ ಯಾವುದೇ ವ್ಯಕ್ತಿ ಮೂಗುತೂರಿಸುವಂತ್ತಿಲ್ಲ ಎಂಬುದಾಗಿ, ಪಡುಬಿದ್ರಿ ಎಸ್ಸೈ ಸತೀಶ್ ಹೇಳಿದ್ದಾರೆ.
ಅವರು ಪಡುಬಿದ್ರಿ ಠಾಣೆಯಲ್ಲಿ ಮುಂದಿನ ದಿನದಲ್ಲಿ ಬರಲಿರುವ ಮುಸ್ಲಿಂ ಧರ್ಮದ ಹಬ್ಬದ ಮುಂಜಾಗ್ರತಾ ಕ್ರಮಕ್ಕಾಗಿ ಸೋಮವಾರ ನಡೆಸಿದ ಶಾಂತಿ ಸಭೆಯಲ್ಲಿ ಮಾತನಾಡಿದರು. ಶಾಂತಿ ಸಭೆಯಲ್ಲಿ ಸೇರಿದ ವಿವಿಧ ಧರ್ಮಗಳ ಸುಮಾರು ೨೫ ಮಂದಿ ಹಬ್ಬದ ದಿನಗಳಲ್ಲಿ ಮಸೀದಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಾಗೂ ಪಡುಬಿದ್ರಿ ಪೇಟೆಯ ಬಳಿಯ ಸರ್ಕಲ್‌ನಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಪ್ರಮುಖವಾಗಿ ಶಬ್ಬೀರ್ ಸಹೇಬ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಎಎಸ್ಸೈ ಕಮಲಾಕ್ಷ, ರಜ್ಹಕ್ ಕಂಚಿನಡ್ಕ, ಹಸನ್ ಕಂಚಿನಡ್ಕ, ಹರೀಶ್ ಕಂಚಿನಡ್ಕ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply