Header Ads
Header Ads
Breaking News

ಎಸ್‌ಇಝೆಡ್ ನಿರ್ಮಿಸಿದ ಅವೈಜ್ಞಾನಿಕ ತಡೆಗೋಡೆ ಕುಸಿತ

ಬಜಪೆ ಸಮೀಪದ ದೊಡ್ಡಿಕಟ್ಟೆಯಲ್ಲಿ ಎಸ್.ಇ.ಝಡ್ ನವರು ನಿರ್ಮಿಸಿದ ಅವೈಜ್ಞಾನಿಕವಾದ ತಡೆಗೋಡೆ ಕುಸಿದು ಸ್ವಯಂಭೋಲೀಂಗೇಶ್ವರ ದೇವಸ್ಥಾನ ಮತ್ತು ನಿವೃತ್ತ ಪಿ.ಡಿ.ಒ ಮಾಧವ ಅಮೀನ್ ಅವರ ಮನೆ ಮುಳುಗಡೆ ಆಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದೆ.ಇಂದು ಮುಂಜಾನೆ ಸುಮಾರು 2 ಗಂಟೆಗೆ ಸಂದರ್ಭ ತಡೆಗೋಡೆ ಕುಸಿದು ತಡೆಗೋಡೆಯ ಒಂದು ಮಗ್ಗುಲಲ್ಲಿ ಸಂಗ್ರಹವಾಗಿದ್ದ ನೀರು ದೇವಸ್ಥಾನ ಮತ್ತು ಮಾಧವ ಅಮೀನ್ ಅವರ ಮನೆ ಮುಕ್ಕಾಲು ಭಾಗ ಮುಳುಗಡೆ ಆಗಿದೆ.

ನೀರಿನ ರಭಸಕ್ಕೆ ಸುಮಾರು20ಅಡಿಯಷ್ಟು ಅಳದ ಕಂದಕ್ಕ ನಿರ್ಮಾಣವಾಗಿದ್ದು, ತೆಂಗು, ಕಂಗು ಮತ್ತಿತರ ಮರಗಳು ಧರೆಗುರುಳಿದೆ, ಮನೆಯ ಮುಂದಿನ ಭಾವಿ ಸಂಪೂರ್ಣ ಮುಚ್ಚಿಗೋಗಿದ್ದು, ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಒಂದು ಕ್ವಾಲೀಸ್ ಕಾರು ಮತ್ತು ಎರಡು ದ್ವಿಚಕ್ರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದೆ, ಮನೆಯ ಒಳಬಾಗದಲ್ಲಿದಲ್ಲಿದ್ದ ಪೀಠೋಪಕರಣಗಳು ಚಲ್ಲಾಪಿಲ್ಲಿ ಆಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ, ಸ್ವಯಂಭೂಲಿಂಗೇಶ್ವರ ದೇವಸ್ಥಾನ ಮತ್ತು ಮನೆಯ ಸುತ್ತ ಸುಮಾರು 10ಅಡಿಯಷ್ಟು ಎತ್ತರದಲ್ಲಿ ಮಣ್ಣಿನ ರಾಶಿ ಸೃಷ್ಟಿಯಾಗಿದೆ.

ಮನೆ ಮತ್ತು ಸ್ವಯಂಭೋಲಿಂಗೇಶ್ವರ ದೇವಸ್ಥಾನದ ಅನತಿ ದೂರದಲ್ಲಿ ಎಸ್.ಇ.ಝಡ್ ನವರು ಎರಡು ಗುಡ್ಡಗಳ ಮಧ್ಯೆ ಸಮತಟ್ಟುಗೋಳಿಸಿ ರಸ್ತೆ ನಿರ್ಮಿಸಿದ್ದು ಒಂದು ಬದಿಯಲ್ಲಿ ತಡೆಗೋಡೆ ನಿರ್ಮಿಸಿದ್ದು ಇದರಿಂದ ಸರಾಗವಾಗಿ ನೀರು ಹರಿದುಹೋಗಲಿ ಸಾದ್ಯವಾಗದ ಕಾರಣ ಈ ದುರ್ಘಟನೆ ಸಂಭವಿಸಿದೆ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಐವನ್ ಡಿಸೋಜ, ಅಭಯಚಂದ್ರ ಜೈನ್, ಕಸ್ತೂರಿ ಪಂಜ ಮತ್ತಿತರ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

Related posts

Leave a Reply