Header Ads
Breaking News

ಎಸ್‌ಕೆಪಿಎ ಮಂಗಳೂರು ವಲಯದ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆ

ಎಸ್‌ಕೆಪಿಎ ಮಂಗಳೂರು ವಲಯದ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಎಸ್‌ಕೆಪಿಎ ಜಿಲ್ಲಾಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ರವರು ಉದ್ಘಾಟಿಸಿದರು. ಪ್ರಸ್ತುತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಲಯದ ಸದಸ್ಯರಾದ ರಾಜ್ ಕುಂದರ್ ಅವರ ಪುತ್ರ ನೀಲ್ ಕುಂದರ್ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ರಮೇಶ್ ಪೂಜಾರಿಯವರ ಪುತ್ರಿ ವಿಶ್ಮಿತಾ ಇವರಿಗೆ ವಲಯದ ವತಿಯಿಂದ ವಿದ್ಯಾನಿಧಿ ನೀಡಿ ಗೌರವಿಸಲಾಯಿತು.
ಮಕ್ಕಳ ದಿನಾಚರಣೆಯ ಆಯೋಜಿಸಿದ ವಲಯಮಟ್ಟದ “ಮುದ್ದುಕಂದ” ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಕಂದಮ್ಮಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ – ಪ್ರಣವಿ. ಎಸ್ (ಛಾಯಾಗ್ರಾಹಕ-ಸುಕೇಶ್ ಗುರುಪುರ, ದ್ವಿತೀಯ -ದಿಶಾನಿ ಎಸ್ (ಛಾಯಾಗ್ರಾಹಕ-ಶ್ರೀಕಾಂತ್ ತಿಲಕ್) ಬಹುಮಾನ ವಿತರಿಸಲಾಯಿತು. ಬಳಿಕ ಸದಸ್ಯರೆಲ್ಲರೂ ಸೇರಿ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ರಂಗೋಲಿಯ ದೀಪ ಬೆಳಗಿಸಿ, ಪಟಾಕಿ ಹೊತ್ತಿಸಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಅಡ್ಯಾರ್, ಅಜಯ್ ಕುಮಾರ್, ವಲಯಧ್ಯಕ್ಷರಾದ ಮಧುಮಂಗಳೂರು, ಉಪಾಧ್ಯಕ್ಷರಾದ ವಸಂತ್ ರಾವ್, ಕಾರ್ಯದರ್ಶಿ ಶ್ರೀಕಾಂತ್ ತಿಲಕ್, ನವೀನ್ ಕೋಡಿಕಲ್ , ಖಜಾಂಚಿ ಮುಕೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಲೋಕೇಶ್, ಪದ್ಮನಾಭ ಸುವರ್ಣ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *