Header Ads
Breaking News

ಎಸ್‌ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾದ ವಿಚಾರ ಸಂಕಿರಣ

ಉಜಿರೆ, ಫೆ. 12: ಉಜಿರೆಯ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶದ ವತಿಯಿಂದ ಸಿದ್ಧವನ ಗುರುಕುಲದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ- 2020 ಅನುಷ್ಠಾನದ ಸವಾಲುಗಳು’ ಕುರಿತಾದ ವಿಚಾರ ಸಂಕಿರಣವನ್ನು ನಿನ್ನೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಧರ್ಮಸ್ಥಳದ ಮಾತೃಶ್ರೀ ಹೇಮಾವತೀ ವಿ.ಹೆಗ್ಗಡೆಯವರು ಉದ್ಘಾಟಿಸಿ ಶುಭಹಾರೈಸಿದರು.

ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ,”ಕಾರಕೂನರನ್ನು ಸೃಷ್ಟಿಸುವ ಶಿಕ್ಷಣ ಇದೆ ಎಂದು ಹೇಳುವ ನಾವು ಅದನ್ನು ಹೋಗಲಾಡಿಸುವ ಕುರಿತು ಗಮನಹರಿಸುವುದಿಲ್ಲ. ಶಿಕ್ಷಣ ಎನ್ನುವುದು ಸಾಗರ ಇದ್ದಂತೆ, ಅದರ ಆಳಕ್ಕಿಳಿದು ಅನ್ವೇಶಿಸುತ್ತಾ ಹೋದಂತೆ ಮುತ್ತುಗಳು ದೊರಕುತ್ತಾ ಹೋಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ, ಚೌಕಟ್ಟನ್ನು ಮೀರಿ ಯೋಚಿಸುವಂತೆ ಮಾಡುತ್ತದೆ. ಹಾಗಾಗಿ ಇದರ ಅನುಷ್ಟಾನಕ್ಕೆ ವಿರೋಧ ಕೇಳಿಬಂದಿಲ್ಲ” ಎಂದು ನುಡಿದರು.

“ಸೃಜನಶೀಲತೆಯನ್ನು ಮೈಗೂಡಿಸಿಕೊಂಡಲ್ಲಿ ಮಾತ್ರ ಮುಂದಿನ ಜನಾಂಗವು ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳಬಹುದು. ಡಿಟಲೀಕರಣವು ಹೊಸ ಅನ್ವೇಷಣೆಗಳಿಗೆ ದಾರಿಮಾಡಿಕೊಡುತ್ತಿದ್ದು, ಮಾನವ ಸಂಪನ್ಮೂಲಗಳ ಸರಿಯಾದ ಬಳಕೆಗೆ ಒತ್ತು ನೀಡಿ, ಸಂಪನ್ಮೂಲದ ಕೊರತೆಯನ್ನು ನಿವಾರಿಸಿದೆ. ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ, ಆರ್ಥಿಕಶಕ್ತಿಯಾಗಿ ಮುನ್ನುಗ್ಗಲು 21ನೇ ಶತಮಾನದ ಶಿಕ್ಷಣ ರಹದಾರಿ‌” ಎಂದು ಅಭಿಪ್ರಾಯಪಟ್ಟರು.ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿಶ್ರಾಂತ ಕುಲಸಚಿವ ಪ್ರೊ.ಎ.ಎಂ. ನರಹರಿಯವರು ಮಾತನಾಡುತ್ತಾ,“ಸಮಾನತೆ ಗುಣಮಟ್ಟ ಹಾಗೂ ಸಮಗ್ರತೆಹೊಸ ಶಿಕ್ಷಣ ನೀತಿಯ ಪ್ರಮುಖ ಅಂಶಗಳು.ಈ ನೀತಿಯನ್ನು ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಅನೇಕ ಸವಾಲುಗಳೂ ತಲೆದೋರುತ್ತದೆ. ಭಾಷಾಮಾಧ್ಯಮದ ಆಯ್ಕೆಯ ಕುರಿತಾಗಿ ಗೊಂದಲಗಳು ಮೂಡುತ್ತದೆ. ಸ್ವಾಯತ್ತತೆ, ಸ್ವಯಂಅಧ್ಯಯನ, ಆಯ್ಕೆಯಾಧಾರಿತ ಶಿಕ್ಷಣ, ಕ್ರಿಯಾತ್ಮಕ ಕಲಿಕೆ, ಸಂಶೋಧನಾತ್ಮಕ ಪರೀಕ್ಷಾ ವಿಧಾನಗಳು, ಸಾಮಥ್ರ್ಯಾಧಾರಿತ ಅಂಕ ನೀಡುವಿಕೆ ಹೆಚ್ಚಿದರೆ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳು ಸಾಧ್ಯ” ಎಂದು ನುಡಿದರು.ಡಾ.ಬಿ.ಎ. ಕುಮಾರ ಹೆಗ್ಡೆ ನಿರೂಪಿಸಿ, ವಂದಿಸಿದರು. ಆಡಳಿತ ವಿಭಾಗದ ರಿಜಿಸ್ಟ್ರಾರ್ ಡಾ.ಬಿ.ಪಿ.ಸಂಪತ್ ಕುಮಾರ್ ಸ್ವಾಗತಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರುಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *