Header Ads
Breaking News

ಎಸ್‌ಡಿಎಂ ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನ ಕಾಲೇಜು ಇಪ್ಪತ್ತೈದನೆ ಪದವಿ ಪ್ರದಾನ ಕಾರ್ಯಕ್ರಮ

ರೋಗಿಗಳಿಗೆ ಸಾಂತ್ವನದ ಮಾತುಗಳೊಂದಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ ಅವರ ಭಯ, ಆತಂಕ ನಿವಾರಿಸಿ ರೋಗವನ್ನು ಶಮನ ಮಾಡಿಆರೋಗ್ಯರಕ್ಷಣೆ ಮಾಡುವುದು ವೈದ್ಯರಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವೈದ್ಯ ವೃತ್ತಿ ಹಣ ಸಂಪಾದನೆಗಾಗಿಅಲ್ಲ. ಮಾನವೀಯತೆಯಿಂದ ಸೇವೆ ಮಾಡಲಿಕ್ಕಾಗಿ.ರೋಗಿಗಳಆರೋಗ್ಯ ಭಾಗ್ಯರಕ್ಷಣೆಗಾಗಿ ವಿವೇಚನೆಯಿಂದ ವೈದ್ಯರುಅಲೊಪತಿ ಹಾಗೂ ಪಾರಂಪರಿಕಚಿಕಿತ್ಸಾ ವಿಧಾನವನ್ನು ಬಳಸಬೇಕು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು (ನಿಮ್ಹಾನ್ಸ್) ನಿರ್ದೇಶಕ ಡಾ| ಬಿ.ಎನ್ ಗಂಗಾಧರ್ ಹೇಳಿದರು.

ಉಜಿರೆಯಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಇಪ್ಪತ್ತೈದನೆ ಪದವಿ ಪ್ರದಾನ ಸಮಾರಂಭ ಉದ್ದೇಶಿಸಿ ಡಾ| ಗಂಗಾಧರ್ ಮಾತನಾಡಿ ವೈದ್ಯ ವೃತ್ತಿ ಪವಿತ್ರ ವೃತ್ತಿಯಾಗಿದೆ. ರೋಗಿಗಳ ರೋಗವನ್ನು ಶಮನಗೊಳಿಸಿ ಆರೋಗ್ಯರಕ್ಷಣೆ ಮಾಡುವುದು ವೈದ್ಯರ ಕರ್ತವ್ಯವಾಗಿದೆ. ರೋಗದ ಲಕ್ಷಣರೋಗಿಯದೈಹಿಕ ಹಾಗೂ ಮಾನಸಿಕ ಸ್ಥಿತಿ, ಜೀವನಶೈಲಿ ಹೊಂದಿ ಕೊಂಡು ವಿವೇಚನೆಯಿಂದ ಸೂಕ್ತ ಚಿಕಿತ್ಸಾ ವಿಧಾನ ಬಳಸಬೇಕು. ಕೇವಲ ಅಲೋಪತಿಯಿಂದಅಥವಾ ಪಾರಂಪರಿಕ ಪದ್ಧತಿಗಳಾದ ಆಯುರ್ವೇದ, ಯುನಾನಿ, ಯೋಗ, ಪ್ರಕೃತಿಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸಾ ವಿಧಾನದಿಂದ ಎಲ್ಲಾ ರೋಗಗಳನ್ನು ಗುಣ ಪಡಿಸಲು ಸಾಧ್ಯವಿಲ್ಲ. ಆದುದರಿಂದ ವೈದ್ಯರು ವಿವೇಚನೆಯಿಂದ ರೋಗಿ ಮತ್ತುರೋಗದ ಲಕ್ಷಣ ಹೊಂದಿಕೊಂಡುಎಲ್ಲಾ ಪದ್ಧತಿಗಳ ಉತ್ತಮ ಅಂಶಗಳನ್ನು ಬಳಸಿ ಸಮಗ್ರಚಿಕಿತ್ಸಾ ವಿಧಾನದಿಂದ ರೋಗಿಗಳ ಸೇವೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಡಾ| ವೀರೇಂದ್ರ ಹೆಗ್ಗಡೆ ಅವರ ದಕ್ಷ ನೇತೃತ್ವದಲ್ಲಿ ಉಜಿರೆಯ ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನಕಾಲೇಜಿನ ಸೇವೆ, ಪ್ರಗತಿ ಮತ್ತು ಸಾಧನೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿ ಇಲ್ಲಿ ಕಲಿತವರು ಆಡಳಿತ ಮಂಡಳಿಗೆ, ಸಂಸ್ಥೆಗೆ, ಪ್ರಾಧ್ಯಾಪಕರಿಗೆ, ತಮ್ಮ ಪೋಷಕರಿಗೆ ಸದಾಕೃತಜ್ಞರಾಗಿ ಇರಬೇಕು ಎಂದು ಅವರು ಸಲಹೆ ನೀಡಿದರು.

ಎಸ್‌ಡಿಎಂ ವಿಶ್ವವಿದ್ಯಾಲಯ ಧಾರವಾಡದ ಇದರ ಕುಲಪತಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ವೈದ್ಯರು ರೋಗಿಗಳಲ್ಲಿ ಆತ್ಮವಿಶ್ವಾಸಮತ್ತು ಭರವಸೆ ಮೂಡಿಸಿ ಅವರನ್ನು ಗುಣಮುಖರನ್ನಾಗಿ ಮಾಡಬೇಕು. ರೋಗ ಬಂದ ಮೇಲೆ ಶಮನಗೊಳಿಸುವುದಕ್ಕಿಂತ ರೋಗ ಬರದಂತೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ವೈದ್ಯರು ಸರಿಯಾದ ಆಹಾರಕ್ರಮ, ಜೀವನ ಶೈಲಿ, ಆರೋಗ್ಯಪೂರ್ಣ ಶಿಸ್ತಿನ ಜೀವನದ ಬಗ್ಯೆ ಮಾರ್ಗದರ್ಶನ, ಸಲಹೆ ನೀಡಬೇಕು.ರೋಗಿಗಳ ಸಮಸ್ಯೆ, ಆತಂಕವನ್ನು ತಾಳ್ಮೆಯಿಂದ, ಮಾನವೀಯತೆಯಿಂದ ಆಲಿಸಬೇಕು.ತಮ್ಮ ಪವಿತ್ರ ವೃತ್ತಿಯಲ್ಲಿ ಪ್ರತಿ ದಿನ ರೋಗಿಗಳಿಂದ ಹೊಸ ವಿಚಾರ, ಸಮಸ್ಯೆಗಳನ್ನು ತಿಳಿದುಕೊಂಡು ತಮ್ಮಜ್ಞಾನಕ್ಷಿತಿಜ ಹಾಗೂ ವೃತ್ತಿದಕ್ಷತೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹಿದರು.

ಧಾರವಾಡದಲ್ಲಿ ಡೆಂಟಲ್‌ಕಾಲೇಜು ಮತ್ತುಆಸ್ಪತ್ರೆ, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಮತ್ತು ಸಂಶೋಧನಾ ಕೇಂದ್ರವನ್ನು ಸೇರಿಸಿಕೊಂಡು ಎಸ್‌ಡಿಎಂ ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸಲಾಗಿದೆ ಮುಂದೆ ಎಲ್ಲಾ ವಿದ್ಯಾಸಂಸ್ಥೆಗಳನ್ನು ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಮಾಡಲಾಗುವುದು ಎಂದರು.

ಹೇಮಾವತಿ ವಿ.ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಮತು ಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು. ಎಸ್‌ಡಿಎಂ ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಅಂಕಿತ್ ಪಾಂಡೆ ಮತ್ತು ಪ್ರಿಯದಾ ಪಾಲ್ ಕಾರ್ಯಕ್ರಮ ನಿರ್ವಹಿಸಿದರು. ಯೋಗ ವಿಭಾಗದ ಡೀನ್ ಡಾ| ಶಿವಪ್ರಸಾದ ಶೆಟ್ಟಿ ಧನ್ಯವಾದವಿತ್ತರು.

Related posts

Leave a Reply

Your email address will not be published. Required fields are marked *