Header Ads
Header Ads
Breaking News

ಎಸ್‌ಸಿಎಸ್‌ಟಿ ಕುಂದುಕೊರತೆ ಪರಿಶೀಲನೆ ಸಭೆ : ಪುತ್ತೂರಿನಲ್ಲಿ ನಡೆದ ಎಸ್‌ಸಿಎಸ್‌ಟಿ ಸಭೆ

ಪುತ್ತೂರು: ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ ಅನುಪಸ್ಥಿತಿಯಲ್ಲಿ ಎಸ್‌ಸಿ – ಎಸ್‌ಟಿ ಕುಂದುಕೊರತೆ ಪರಿಶೀಲನೆ ಸಭೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆದಿದೆ.

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಎಸ್‌ಸಿ – ಎಸ್‌ಟಿ ಕುಂದುಕೊರತೆ ಪರಿಶೀಲನೆ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಬೇಕಾದ ತಹಶೀಲ್ದಾರ್ ಅವರು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಎಸಿಬಿಯವರಿಂದ ಬಂಧಿಸಲ್ಪಟ್ಟಿರುವುದರಿಂದ ಅವರ ಪರವಾಗಿ ಉಪತಹಶೀಲ್ದಾರ್, ತಾ.ಪಂ. ಇಒ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸಭೆ ನಡೆಸಲು ಆರಂಭಿಸಿದಾಗ ಸಂಘಟನೆಯ ಮುಖಂಡರು ವಿರೋಧ ವ್ಯಕ್ತಪಡಿಸಿದರು.
ಸಭೆಗೆ ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ ಬರಬೇಕು. ಇಲ್ಲಿ ಕಂದಾಯ ಇಲಾಖೆಗೆ ಸಂಬಂಽಸಿದ ವಿಚಾರಗಳೇ ಹೆಚ್ಚು ಚರ್ಚಿಸಲ್ಪಡುತ್ತವೆ. ಜನವರಿಯಲ್ಲಿ ಸಭೆ ನಡೆದ ಬಳಿಕ ಸಭೆ ನಡೆಯದೆ ಆರು ತಿಂಗಳು ಕಳೆದಿದೆ. ದಲಿತರ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಹೀಗಾದರೆ ಅಭಿವೃದ್ಧಿ ಸಾಧ್ಯವಾಗುವುದಾದರೂ ಹೇಗೆ?. ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ ಅನುಪಸ್ಥಿತಿಯಲ್ಲಿ ಸಭೆ ನಡೆಸಲು ಬಿಡುವುದಿಲ್ಲ ಎಂದು ಮುಖಂಡರಾದ ಗಿರಿಧರ ನಾಯ್ಕ್, ಬಾಲಚಂದ್ರ ಸೊರಕೆ, ಸೇಸಪ್ಪ ನೆಕ್ಕಿಲ ಮೊದಲಾದವರು ಆಗ್ರಹಿಸಿದರು.
ಕೆಲಸಗಳು ಆಗುತ್ತಿಲ್ಲ.
ಗಿರಿಧರ್ ಮಾತನಾಡಿ, ನಾನು ಸುಳ್ಯದ ಸಭೆಗೂ ಹೋಗುತ್ತೇನೆ. ಅಲ್ಲಿನ ತಹಶೀಲ್ದಾರ್ ಉತ್ತಮ ಸ್ಪಂದನೆ ನೀಡುತ್ತಾರೆ. ಆದರೆ ಪುತ್ತೂರಿನಲ್ಲಿ ದಲಿತರಿಗೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನೇ ಮಾಡಿಕೊಡುತ್ತಿಲ್ಲ. ತಾಲೂಕು ಆಫೀಸ್‌ಗೆ ತೆರಳಿದರೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಸಹಾಯಕ ಕಮಿಷನರ್ ಆದರೂ ಬರಬೇಕು. ನಮಗೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದೆ ಎಂದು ಹೇಳಿದರು.
ಸಹಾಯಕ ಕಮಿಷನರ್ ಅವರು ಸಭೆ ನಡೆಸಲು ತಿಳಿಸಿದ್ದಾರೆ. ಅವರು ಬೇರೆ ಕಾರ್ಯ ನಿಮಿತ್ತ ತೆರಳಿರುವುದರಿಂದ ಈಗ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ತಹಶೀಲ್ದಾರ್, ಸಹಾಯಕ ಕಮಿಷನರ್ ಇಲ್ಲದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಂಘಟನೆಯ ಮುಖಂಡರು ಹಾಗೂ ಸಭೆಯಲ್ಲಿ ಪಾಲ್ಗೊಂಡರು ಸಭೆಯನ್ನು ಬಹಿಷ್ಕರಿಸಿ ತೆರಳಿದವರು.
ಅನಂತರ ತಾ.ಪಂ. ಕಾರ್ಯನಿರ್ವಹಣಾಽಕಾರಿ ಜಗದೀಶ್ ಎಸ್. ಮಾತನಾಡಿ, ಈ ಸಭೆಯ ಅಧ್ಯಕ್ಷರು ತಹಶೀಲ್ದಾರ್ ಅವರೇ ಆಗಿರುತ್ತಾರೆ. ಸಭೆ ಇಂದು ಬೇಡ ಎಂದಾದರೆ ಮುಂದಿನ ದಿನವನ್ನು ನಿಗದಿ ಮಾಡೋಣ ಎಂದು ಹೇಳಿದರು. ಬಳಿಕ ಸಭೆಯನ್ನು ಬರ್ಖಾಸ್ತುಗೊಳಿಸಲಾಯಿತು. ಮುಂದಿನ ಸಭೆಯ ದಿನಾಂಕವನ್ನು ತಿಳಿಸುವುದಾಗಿ ಇಒ ಹೇಳಿದರು.
ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಸಿ.ಎಚ್., ಉಪ ತಹಶೀಲ್ದಾರ್ ರಾಮಣ್ಣ ನಾಯ್ಕ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಽಕಾರಿಗಳು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *