Header Ads
Header Ads
Header Ads
Header Ads
Header Ads
Header Ads
Breaking News

ಎಸ್‍ಎಸ್‍ಎಫ್ ತೊಕ್ಕೊಟ್ಟು ಸೆಕ್ಟರ್ ಆಶ್ರಯದಲ್ಲಿ ರಕ್ತದಾನ ಶಿಬಿರ

ಉಳ್ಳಾಲ: ಎಸ್‍ಎಸ್‍ಎಫ್ ತೊಕ್ಕೊಟ್ಟು ಸೆಕ್ಟರ್ ಹಾಗೂ ಎಸ್‍ಎಸ್‍ಎಫ್ ಮದನಿನಗರ ಶಾಖೆಯ ಜಂಟಿ ಆಶ್ರಯದಲ್ಲಿ ಐತಿಹಾಸಿಕವಾದ ಬೃಹತ್ ರಕ್ತದಾನ ಶಿಬಿರವು ಯಾನೆಪೋಯ, ಕಣಚೂರು, ಕೆ.ಎಸ್.ಹೆಗ್ಡೆ ಹಾಗೂ ಫಾದರ್ ಮುಲ್ಲರ್ ಕಂಕನಾಡಿ ಆಸ್ಪತ್ರೆಗಳ ಸಹಭಾಗಿತ್ವದೊಂದಿಗೆ ಕುತ್ತಾರು ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ನಡೆಸಲಾಯಿತು.ರಕ್ತದಾನದಲ್ಲಿ ದ.ಕ ಜಿಲ್ಲೆಯಲ್ಲೇ ಕ್ರಾಂತಿಕಾರಿ ಸೇವೆ ನೀಡುತ್ತಿರುವ ಬ್ಲಡ್ ಸೈಬೋ ಅದೆಷ್ಟೋ ಅರ್ಹ ರೋಗಿಗಳಿಗೆ ಕ್ಲಪ್ತ ಸಮಯಕ್ಕೆ ರಕ್ತದ ಏರ್ಪಾಡು ಮಾಡಿಸಿ ಜೀವಗಳನ್ನು ರಕ್ಷಿಸಿದೆ. ದ.ಕ.ಜಿಲ್ಲಾ ಬ್ಲಡ್ ಸೈಬೋ ಇದರೆ 115ನೇ ರಕ್ತದಾನ ಶಿಬಿರದಲ್ಲಿ ಸಾಂತ್ವನದಲ್ಲಿಯೂ, ಸಾಮಜಿಕ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುವ ತೊಕ್ಕೊಟ್ಟು ಸೆಕ್ಟರ್, ಇದೀಗ ದ.ಕ. ಜಿಲ್ಲಾ ಬ್ಲಡ್ ಸೈಬೋ ಇತಿಹಾಸದಲ್ಲಿಯೇ ದಾಖಲೆಯ 170 ರಕ್ತದಾನ ಮಾಡಿ ರಕ್ತದಾನದಲ್ಲಿಯೂ ಎಲ್ಲರಿಗೂ ಮಾದರಿಯಾಯಿತು.
ಸೆಕ್ಟರ್ ಉಪಾಧ್ಯಕ್ಷರಾದ ರಝಾಖ್ ಸಅದಿ ಉಸ್ತಾದರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಬಹುಮಾನ್ಯರಾದ ಇನ್ನೋರ್ವ ಸೆಕ್ಟರ್ ಉಪಾಧ್ಯಕ್ಷರಾದ ಇಲ್ಯಾಸ್ ಸಖಾಫಿ ಉಸ್ತಾದರ ದುಆ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಳೇಕಲ ಸ್ವಾಗತಿಸಿದರು. ಹಾಗೆಯೇ ದ.ಕ ಜಿಲ್ಲಾ ಈಸ್ಟ್ ಝೋನ್ ಅಧ್ಯಕ್ಷರಾದ ಅಯ್ಯೂಬ್ ಮಹ್ಳರಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಎಸ್‍ಎಸ್‍ಎಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ದ.ಕ. ಬ್ಲಡ್ ಸೈಬೋ ಇದರ ಸಂಚಾಲಕರಾಗಿರುವ ಕರೀಂ ಕದ್ಕಾರ್ ರವರು ಬ್ಲಡ್ ಸೈಬೋ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು. ಎಸ್‍ಎಸ್‍ಎಫ್ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಸಖಾಫಿ, ಉಳ್ಳಾಲ ಡಿವಿಶನ್ ಅಧ್ಯಕ್ಷ ಖುಬೈಬ್ ತಂಗಳ್, ಡಿವಿಶನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಡಿವಿಶನ್ ಸೈಬೋ ಸಂಚಾಲಕರಾಗಿರುವ ಹಕೀಂ ಪೂಮನ್, ಡಿವಿಶನ್ ಬ್ಲಡ್ ಉಸ್ತುವಾರಿಗಳಾದ ಅಲ್ತಾಫ್ ಶಾಂತಿಭಾಗ್ ಹಾಗೂ ಹಂಝ ಸುಂದರಿಭಾಗ್ ಶಿಬಿರಕ್ಕೆ ಶುಭ ಹಾರೈಸಿದರು.

ಉಳಿದಂತೆ ಡಿವಿಶನ್ ಕಾರ್ಯದರ್ಶಿಯಾಗಿರುವ ಜಾಫರ್ ಯುಎಸ್, ಸೆಕ್ಟರ್ ಉಸ್ತುವಾರಿಯಾಗಿರುವ ಸಿದ್ದೀಕ್ ಕೊಮರಂಗಲ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಸಫ್ವಾನ್ ಮಾರ್ಗತಲೆ, ಸ್ಥಳೀಯ ಮದನಿನಗರ ಜಮಾಅತ್ ಖತೀಬರಾಗಿರುವ ಮುದ್ರಿಕ ಮದನಿ, ಇಸ್ಮಾಯಿಲ್ ಮದನಿ ಮೊರಕ್ಕೋ, ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *