Header Ads
Header Ads
Breaking News

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆದ ಭಾಷೆ ಕಲಿಕಾ ಕಾರ್ಯಾಗಾರ

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಎರಡು ದಿನಗಳ ಭಾಷೆ ಕಲಿಕಾ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಇಂಗ್ಲೀಷ್ ಏಜ್ ಸಂಸ್ಥೆಯ ಮಮತಾ.ವಿ.ಆರ್ ಹಾಗೂ ಡಾ.ಸುಧೀಂದ್ರ ಕುಮಾರ್ ಮಾರ್ಗದರ್ಶನ ನೀಡಿದರು. ಇಂಗ್ಲಿಷ್ ಭಾಷೆಯ ಕುರಿತಾಗಿ ಮಮತಾ.ವಿ.ಆರ್ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಒದಗಿಸಿದರು. ಮಾತೃಭಾಷೆ ಗಟ್ಟಿಯಾಗಿದ್ದರೆ ಇಂಗ್ಲಿಷ್ ಕಲಿಕೆ ಸುಲಭವಾಗುತ್ತದೆ. ಆದ್ದರಿಂದ ಇಂಗ್ಲಿಷ್ ಜೊತಜೊತೆಗೆ ಮಾತೃಭಾಷೆಯಲ್ಲೂ ಅಳವಾದ ಜ್ಞಾನವನ್ನು ಬೆಳೆಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಪ್ರಸ್ತುತ ಸಂವಹನಕ್ಕೆ ಇಂಗ್ಲಿಷ್ ಪ್ರಮುಖ ಸಾಧನವಾಗಿದೆ. ಶುದ್ಧ ಭಾಷೆಯ ಬಳಕೆಗೆ ಗಮನಹರಿಸಿ ಎಂದ ಅವರು ಅಮೇರಿಕನ್ ಹಾಗೂ ಬ್ರಿಟನ್ ಇಂಗ್ಲಿಷ್ ನಡುವಣ ವ್ಯತ್ಯಾಸ ಹಾಗೂ ಶಬ್ದಗಳ ಉಚ್ಛಾರದ ಭಿನ್ನತೆಯನ್ನು ವಿವರಿಸಿದರು.  ಡಾ.ಸುಧೀಂದ್ರ ಕುಮಾರ್ ಏಕಾಗ್ರತೆ ಹಾಗೂ ಮನಸ್ಸಿನ ಅಪಾರ ಸಾಧ್ಯತೆಗಳ ಬಗ್ಗೆ ತಿಳಿಸಿಕೊಟ್ಟರು. ಜಾಗೃತ ಮನಸ್ಸು ಎಂಥಾ ಅಸಾಧ್ಯಗಳನ್ನೂ ಸಾಧ್ಯವಾಗಿಸಬಲ್ಲದು ಎಂದ ಅವರು ಏಕಾಗ್ರತೆಯನ್ನು ಕಾಪಾಡಿಕೊಳ್ಳುವ ತಂತ್ರಗಾರಿಕೆಯನ್ನು ಪ್ರಾತ್ಯಕ್ಷಿಕವಾಗಿ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.

ನೆನಪಿನ ಶಕ್ತಿ ವೃದ್ಧಿಸುವ ಹಾಗೂ ಮನಸ್ಸನ್ನು ನಿಯಂತ್ರಿಸುವ ವಿಧಾನಗಳನ್ನು ವಿವರಿಸಿದ ಡಾ.ಸುಧೀಂದ್ರ, ವಿದ್ಯಾರ್ಥಿಗಳಿಂದಲೇ ಹಲವು ಚಟುವಟಿಕೆಗಳನ್ನು ಮಾಡಿಸಿ ಪ್ರಾಯೋಗಿಕ ಮಾಹಿತಿ ನೀಡಿದರು.ಕಾರ್ಯಾಗಾರದಲ್ಲಿ ಪ್ರಾಧ್ಯಾಪಕರಾದ ಡಾ.ಶಶಿಪ್ರಭಾ, ಡಾ. ಅಕ್ಷತಾ, ಡಾ.ಪುರಂದರ, ಚಿದಾನಂದ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *