Header Ads
Breaking News

ಎಸ್.ಡಿ.ಎಂ ವಿಜ್ಞಾನ ಸಿಂಚನ 2020 : ಪೂರ್ಣಪ್ರಜ್ಞ ಕಾಲೇಜು ತಂಡಕ್ಕೆ ಸಮಗ್ರ ಪ್ರಶಸ್ತಿ

 ಮೂಲ ವಿಜ್ಞಾನ ಹಾಗೂ ಸಂಶೋಧನೆಗೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ಈ ವಲಯಗಳೆಡೆಗೆ ಸೆಳೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಬಿ.ಗಣಪಯ್ಯ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಎಸ್.ಡಿ.ಎಂ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಅಂತರ್‍ಕಾಲೇಜು ಸ್ಪರ್ಧೆ ‘ವಿಜ್ಞಾನ ಸಿಂಚನ 2020’ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮೂಲ ವಿಜ್ಞಾನ ಮತ್ತು ಸಂಶೋಧನಾ ವಲಯವನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಈ ಕ್ಷೇತ್ರಗಳತ್ತ ಅವರನ್ನು ಸೆಳೆಯಲು ವಿಜ್ಞಾನ ಉತ್ಸವಗಳು ಸಹಾಯಕವಾಗುತ್ತವೆ ಎಂದರು.

‘ವಿಜ್ಞಾನ ಸಿಂಚನ 2020’ರ ಸಮಗ್ರ ಪ್ರಶಸ್ತಿಯನ್ನು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ತಂಡ ಪಡೆಯಿತು. ರನ್ನರ್ ಅಪ್ ಪ್ರಾಶಸ್ತ್ಯವನ್ನು ಬಂಟ್ವಾಳದ ಎಸ್.ವಿ.ಎಸ್ ಕಾಲೇಜ್ ಪಡೆದುಕೊಂಡಿತು.
ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜಿಸಿದ್ದು ಸ್ಟಾರ್ ಆಫ್ ವಿಜ್ಞಾನ ಸಿಂಚನ, ಸೆರಿಬ್ರೋ (ಕ್ವಿಜ್), ಫೋರ್ಜ್ ಮಿಮ್ಯೊ(ವಿಜ್ಞಾನ ಮಾದರಿ) ಸೇರಿದಂತೆ ಮುಂತಾದ ಸ್ಪದ್ರ್ಧೆಗಳಿದ್ದು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 7 ಕಾಲೇಜಿನ ಸುಮಾರು 75 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಎಸ್.ಡಿ.ಎಂ ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ಪ್ರೊ. ಎಸ್.ಎನ್ ಕಾಕತ್ಕರ್ ಹಾಗೂ ಎಸ್.ಡಿ.ಎಂ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಂದಕುಮಾರಿ ಉಪಸ್ಥಿತರಿದ್ದರು.

ವರದಿ: ಮೇಘನಾ ಹೆಗಡೆ
ಚಿತ್ರ: ಚಂದನಾ

Related posts

Leave a Reply

Your email address will not be published. Required fields are marked *