Header Ads
Breaking News

ಎಸ್.ಡಿ.ಎಂ ಸಾಧಕರ ದಿನಾಚರಣೆ

ಶೈಕ್ಷಣಿಕ ಅಧ್ಯಯನದ ಹಂತಗಳಲ್ಲಿರುವಾಗಲೇ ವಿದ್ಯಾರ್ಥಿಗಳು ಅತ್ಯುನ್ನತ ಗುರಿಗಳನ್ನಿರಿಸಿಕೊಂಡು ಸಾಧನೆಯ ಹಾದಿ ಕ್ರಮಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಲಂಡನ್ನಿನ ನ್ಯೂಯೋಟಾನಲ್ ಮೆಡಿಸಿನ್ ಹೋಮಸ್ಟೋನ್ ಯುನಿವರ್ಸಿಟಿ ಪ್ರಾಧ್ಯಾಪಕ ಪ್ರೊ.ನರೇಂದ್ರ ಎ ಅಭಿಪ್ರಾಯಪಟ್ಟರು.ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಸಾಧಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಚಿಕ್ಕ ಚಿಕ್ಕ ಗುರಿಗಳೊಂದಿಗೆ ಹೆಜ್ಜೆ ಇರಿಸಿ ಅತ್ಯುನ್ನತ ಮಟ್ಟ ತಲುಪುವ ಕನಸುಗಳು ಯಶಸ್ವಿ ಬದುಕಿಗೆ ಸಹಾಯಕವಾಗುತ್ತವೆ. ಈ ಹಂತದಲ್ಲಿಯೇ ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಓದುವ ಕಾಲಕ್ಕೇ ಈ ಆಲೋಚನೆಯೊಂದಿಗೆ ಗುರುತಿಸಿಕೊಂಡರೆ ನಿರೀಕ್ಷಿತ ಗುರಿ ತಲುಪಿಕೊಳ್ಳಲು ಸಾಧ್ಯ ಎಂದರು.ಸಂತೋಷ ಸಾಧನೆಯನ್ನು ಪ್ರತಿನಿಧಿಸುತ್ತದೆ. ಹಣ ಸಂತೋಷ ಕೊಡುತ್ತದೆ. ಆದರೆ ಸಾಧನೆ ಸಂತಸವನ್ನು ಕೊಡುತ್ತದೆ. ದಾನ ಕೊಡುವುದರಿಂದ ಸಂತೋಷ ದೊರಕುತ್ತದೆ. ಪರಿಸರವನ್ನು ಆಸ್ವಾದಿಸುವುದರಿಂದ ಸಂತೋಷ ದೊರಕುತ್ತದೆ. ಸಮತೋಲನ ಆಹಾರದಿಂದಲೂ ಆನಂದ ದೊರಕುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಮಾತನಾಡಿದರು. ಸಲಹೆಗಳು ಮಾರುಕಟ್ಟೆಯಲ್ಲಿರುವ ಔಷಧಗಳಂತೆ. ಕುವೆಂಪು ಅವರ ಕವಿತೆಯನ್ನು ಉಲ್ಲೇಖಿಸಿ ಆನಂದಮಯ ಈ ಜಗಹೃದಯ ಎಂದರು. ಭಗವಂತ ಕೊಟ್ಟದ್ದರಲ್ಲಿ ಸಂತೋಷಪಡಬೇಕು. ನಮ್ಮ ಸಾಧನೆ ನಮಗೆ ಸಂತಸ ತಂದರೆ ಅದುವೇ ದೊಡ್ಡ ಸಾಧನೆ ಎಂದರು.
ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಸತೀಶ್ಚಂದ್ರ ಮಾತನಾಡಿ ಸಾಧಕರ ಜೀವನದಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆದುಕೊಳ್ಳಬೇಕು ಎಂದರು. ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷ ಇದೆ. ನಿಮ್ಮೆಲ್ಲರ ಚಿತ್ತ ಜಾÐನವನ್ನು ಹಂಚುವುದರ ಕಡೆಗೂ ಇರಲಿ ಎಂದರು.
ಸಹಾಯಕ ಪ್ರಾಧ್ಯಾಪಕ ಸುವೀರ್ ಜೈನ್ ಸ್ವಾಗತಿಸಿದರು. ಪೂಜಿತಾ ವರ್ಮ ವಂದಿಸಿದರು. ಕಾಲೇಜಿನ ವಿವಿಧ ಸಾಧಕರು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಲಾಯಿತು.

ವರದಿ : ಸ್ವಸ್ತಿಕ್ ಕನ್ಯಾಡಿ

Related posts

Leave a Reply

Your email address will not be published. Required fields are marked *