Header Ads
Breaking News

ಎಸ್. ಡಿ. ಎಂ. ಸಿಬ್ಬಂದಿ ಸೌಹಾರ್ದ ಸಹಕಾರಿ(ನಿ) ಉಜಿರೆ : ವಾರ್ಷಿಕ ಮಹಾಸಭೆ

ಸರ್ವರ ಹಿತಸಾಧನೆಗೆ ಬೇಕು ಸಹಕಾರೀ ತತ್ವ. ಡಾ ಶ್ರೀಧರ ಭಟ್.ಸಹಕಾರೀ ತತ್ವ ಸಂಘಜೀವಿಯಾದ ಮಾನವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದದ್ದು. ಸದಸ್ಯರಿಗಾಗಿ ಸದಸ್ಯರಿಂದ ಸದಸ್ಯರೇ ಒಟ್ಟುಸೇರಿ ಆರಂಭಿಸಿದ ಈ ಸಹಕಾರಿಯು ಇಂದು ಕಾಲೇಜಿನ ಸಿಬ್ಬಂದಿಗಳ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸುತ್ತಿದೆ. ಕೇವಲ ಸದಸ್ಯರಿಂದ ಸಂಪನ್ಮೂಲವನ್ನು ಕ್ರೋಢೀಕರಿಸಿ ಅದರ ಲಾಭಾಂಶವನ್ನು ಸದಸ್ಯರಿಗೆ ಹಂಚುವ ಕೆಲಸವನ್ನು ಈ ಸಹಕಾರಿಯು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದು ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಸಹಕಾರಿಯ ಅಧ್ಯಕ್ಷ ಡಾ ಶ್ರೀಧರ ಭಟ್ ಹೇಳಿದರು.
ಇತ್ತೀಚೆಗೆ ಎಸ್. ಡಿ. ಎಂ. ಸಿಬ್ಬಂದಿ ಸೌಹಾರ್ದ ಸಹಕಾರಿ(ನಿ) ಉಜಿರೆ ಇದರ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಎಸ್ ಡಿ ಎಂ ಕಾಲೇಜಿನ ಇಂದ್ರಪ್ರಸ್ಥ ಅಡಿಟೋರಿಯಮ್ ನಲ್ಲಿ ಎಸ್. ಡಿ. ಎಂ. ಸಿಬ್ಬಂದಿ ಸೌಹಾರ್ದ ಸಹಕಾರಿ(ನಿ) ಉಜಿರೆ ಇದರ ಅಧ್ಯಕ್ಷರಾದ ಡಾ ಶ್ರೀಧರ ಭಟ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅಭ್ಯಾಗತರಾಗಿ ಎಸ್ ಡಿ ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸತೀಶ್ಚಂದ್ರ ಮತ್ತು ಎಸ್ ಡಿ ಎಂ ಪದವಿಪೂರ್ವಕಾಲೇಜಿನ ಪ್ರಾಚಾರ್ಯ ಪ್ರೊ| ದಿನೇಶ್ ಚೌಟ ಇವರು ಭಾಗವಹಿಸಿದ್ದರು.
ನಿರ್ದೇಶಕರಾದ ಶ್ರೀ ಪ್ರಮೋದಕುಮಾರ್ ಸ್ವಾಗತಿಸಿದರು. ಶ್ರೀ ತುಕಾರಾಮ್ ಸಾಲಿಯಾನ್ ರವರು ನೋಟೀಸು ಓದಿ ದಾಖಲಿಸಿದರು. ಉಪಾಧ್ಯಕ್ಷರಾದ ಡಾ ವಿಶ್ವನಾಥ್ ವರದಿ ವಾಚನ ಗೈದರು. 2019-20ನೇ ಸಾಲಿನ ಲೆಕ್ಕಪತ್ರಮಂಡನೆ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮಕುಮಾರ್ ಮಂಡಿಸಿದರು. ಸಹಕಾರಿಯ ಬೆಳವಣಿಗೆಯನ್ನು ಕುರಿತು ಅಭ್ಯಾಗತರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರ್ಷ ಲೆಕ್ಕಪರಿಶೋಧನೆ ನಡೆಸಿದ ಅಂ ಸುಜಯ್ ಡಿ ಆಳ್ವ ಅವರನ್ನೇ 2020-2021ರ ಮುಂದಿನ ಆರ್ಥಿಕವರ್ಷಕ್ಕೆ ಲೆಕ್ಕಪರಿಶೋಧಕರನ್ನಾಗಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಎಸ್. ಡಿ. ಎಂ. ಸಿಬ್ಬಂದಿ ಸೌಹಾರ್ದ ಸಹಕಾರಿ(ನಿ) ಉಜಿರೆ ಅಧ್ಯಕ್ಷರಾದ ಡಾ ಶ್ರೀಧರ ಭಟ್ ಮಾತನಾಡುತ್ತಾ ಈ ಸಹಕಾರಿಯ ಅಗತ್ಯತೆ ಮತ್ತು ಇದನ್ನು ಇನ್ನಷ್ಟು ಬಲಪಡಿಸುವ ಮಾರ್ಗೋಪಾಯಗಳನ್ನು ಹಂಚಿಕೊಂಡರು. ಎಸ್. ಡಿ. ಎಂ. ಸಿಬ್ಬಂದಿ ಸೌಹಾರ್ದ ಸಹಕಾರಿ(ನಿ) ಉಜಿರೆ ಇದು ಆರಂಭವಾಗಿ ಮೊದಲನೆಯ ವರ್ಷವಾದುದರಿಂದ ಮತ್ತು ಕೊರೊನಾ ಸಂಕಷ್ಟ ಸಮಯ ವಾದುದರಿಂದ ನಿರೀಕ್ಷಿತ ಮಟ್ಟದಲ್ಲಿ ವ್ಯವಹಾರ ನಡೆಯದಿರುವುದರಿಂದ ಲಾಭಾಂಶದಲ್ಲಿ ನಿರೀಕ್ಷಿತ ಪ್ರಗತಿಯಾಗಲಿಲ್ಲ. ಈ ವರ್ಷದ ಲಾಭಾಂಶವನ್ನು ಸದಸ್ಯರಿಗೆ ಡಿವಿಡೆಂಡ್ ರೂಪದಲ್ಲಿ ಅಧ್ಯಕ್ಷರು ಘೋಷಣೆಮಾಡಿದರು. ಸದಸ್ಯರಿಂದ ಬಂದ ಪ್ರಶ್ನೆಗಳಿ ಗೆ ಅಧ್ಯಕ್ಷರು ಉತ್ತರಿಸಿದರು. ಧನ್ಯವಾದದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಸಭೆಯಲ್ಲಿ ನಿರ್ದೇಶಕರುಗಳಾದ ಡಾ. ಕುಮಾರ ಹೆಗ್ಡೆ ಶ್ರೀ. ಜಿ.ಆರ್. ಭಟ್ ಡಾ. ನವೀನ್ ಕುಮಾರ್ ಶ್ರೀ ದಿನೇಶ್ ನಾಯ್ಕ ಶ್ರೀ ಕೇಶವ ಮೊಗೇರ ಶ್ರೀ ತುಕಾರಾಮ್ ಸಾಲಿಯಾನ್ ಡಾ.ವಂದನಾಜೈನ್,ಶ್ರೀಮತಿ ಲಿಡಿಯಾ ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *