Header Ads
Breaking News

ಎಸ್.ಡಿ.ಎಮ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಗಾರ

ಮಾದಕ ವಸ್ತುಗಳ ಸೇವನೆಯು ಜೀವನದ ಸುಂದರ ಕ್ಷಣಗಳನ್ನು ನಿರ್ನಾಮಗೊಳಿಸುತ್ತದೆ. ಅದರಲ್ಲೂ ವಿದ್ಯಾರ್ಥಿಗಳ ಪಾಲಿಗೆ ದುಷ್ಚಟಗಳು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಹೇಳಿದರು.

ಇವರು ಶನಿವಾರದಂದು ಎಸ್.ಡಿ.ಎಮ್ ಕಾಲೇಜಿನ ಸಮ್ಯಕ್ದರ್ಶನ ಸಭಾಂಗಣದಲ್ಲಿ ಎನ್.ಎಸ್.ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಸಂಯುಕ್ತ ಆಶ್ರಯದಲ್ಲಿ ನಡೆದ ರ್ಯಾಗಿಂಗ್ ತಡೆಗಟ್ಟುವಿಕೆ, ಮಾದಕ ವ್ಯಸನ,ಲೈಂಗಿಕ ದೌರ್ಜನ್ಯ ಹಾಗೂ ಪರಿಸರ ಸಂರಕ್ಷಣೆಯ ಕುರಿತಾದ ಒಂದು ದಿನದ ಜಾಗೃತಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮತನಾಡಿದರು. ಹದಿಹರೆಯದ ವಯಸ್ಸಿನಲ್ಲಿ ಮಾದಕ ವಸ್ತುಗಳಿಗೆ ದಾಸರಾದರೆ ಮುಂದಿನ ಭವಿಷ್ಯಕ್ಕೆ ಕುತ್ತು ತರುತ್ತದೆ.ಇದರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಪ್ರೇರೇಪಣೆ ದೊರೆಯುತ್ತದೆ. ಹೀಗಾಗಿ ಇಂತಹ ಜಾಗೃತಿ ಕಾರ್ಯಗಳು ಮಕ್ಕಳಿಗೆ ತುಂಬಾ ಸಹಕಾರಿ ಎಂದು ಹೇಳಿದರು.

ಕಾರ್ಯಕ್ರಮವು ನಾಲ್ಕು ಅವಧಿಗಳನ್ನು ಹೊಂದಿದ್ದು ಮಾದಕ ವಸ್ತು ವಿರೋಧಿಯ ಕುರಿತು ಜಾಗೃತಿ ಮೂಡಿಸಲು ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಅಧಿಕಾರಿ ಶ್ರೀ ದೇವಿ ಪ್ರಸಾದ್, ಲೈಂಗಿಕ ದೌರ್ಜನ್ಯದ ಮುನ್ನೆಚ್ಚರಿಕೆ ಕ್ರಮಗಳಿಗೆ ಉಜಿರೆ ನ್ಯಾಚುರೋಪತಿ ಕಾಲೇಜಿನ ಪ್ರೊ.ಆಶಾ, ರ್ಯಾಗಿಂಗ್ ತಡೆಗಟ್ಟುವಿಕೆಗೆ ಬೆಳ್ತಂಗಡಿ ಪೋಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಶ್ರೀಲಾರೆನ್ಸ್ ಪಿ.ಆರ್ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಎಸ್.ಡಿ.ಎಮ್ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕುಮಾರ್ ಹೆಗ್ಡೆ ಬಿ.ಎ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಯೂತ್ ರೆಡ್ ಕ್ರಾಸ್ ಹಾಗೂ ಎನ್,ಎಸ್,ಎಸ್ ಯೋಜನಾಧಿಕಾರಿಗಳು, ಸ್ವಯಂಸೇವಕರು ಉಪಸ್ಥಿತರಿದ್ದರು. ರಚನಾ ಸ್ವಾಗತಿಸಿ, ರಕ್ಷಾ ನಿರೂಪಿಸಿದರು

ರಕ್ಷಾ ಎಸ್.ಡಿ.ಎಮ್ ಕಾಲೇಜು ಉಜಿರೆ

Related posts

Leave a Reply

Your email address will not be published. Required fields are marked *