Header Ads
Header Ads
Breaking News

ಎ.19ರಂದು ಡಾ.ರಘು ನಾಮಪತ್ರ ಸಲ್ಲಿಕೆ

ಸುಳ್ಯ: ಮುಂಬರುವ ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ರಘು ಎ.೧ ೯ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ ಆರಾಧನಾಲಯಗಳಿಗೆ ಭೇಟಿ ನೀಡಿದ ಬಳಿಕ ಪಕ್ಷದ ಕಛೇರಿಯಿಂದ ಮೆರವಣಿಗೆಯಲ್ಲಿ ಸಾಗಿ ಕೆವಿಜಿ ಪುರಭವನದಲ್ಲಿ ಸಮಾವೇಶ ನಡೆಯಲಿದೆ. ಅಂದೇ ನಾಮಪತ್ರ ಸಲ್ಲಿಕೆ ಕೂಡಾ ಆಗಲಿದೆ. ಸಮಾವೇಶದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತಿತರ ನಾಯಕರು ಭಾಗಿಯಾಗಲಿದ್ದಾರೆ ಎಂದವರು ಹೇಳಿದರು.
ಕಾಂಗ್ರೆಸ್ ಅಭಿವೃದ್ಧಿ ಮಾನದಂಡವನ್ನೇ ಮುಂದಿಟ್ಟು ಈ ಚುನಾವಣೆ ಎದುರಿಸಲಿದೆ. ಬಿಜೆಪಿ ಏನೇ ತಂತ್ರಗಾರಿಕೆ ಮಾಡಿದರೂ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ. ಸುಳ್ಯದ ೧೧೦ ಕೆವಿ ಸಬ್‌ಸ್ಟೇಷನ್, ಗ್ರಾಮೀಣ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ, ಕೃಷಿಕರ ಸಮಸ್ಯೆ ಕುರಿತಂತೆ ಶಾಸಕರ ವೈಫಲ್ಯಗಳೇ ನಮಗೆ ಚುನಾವಣಾ ವಿಚಾರಗಳು ಎಂದು ಜಯಪ್ರಕಾಶ್ ರೈ ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ತಿರುಮಲೇಶ್ವರಿ ಜಾಲ್ಸೂರು, ಸುಧೀರ್ ರೈ ಮೇನಾಲ, ಹಸೈನಾರ್ ಹಾಜಿ ಗೋರಡ್ಕ, ಹರಿಪ್ರಕಾಶ್ ಅಡ್ಕಾರ್, ಪ್ರಸಾದ್ ರೈ ಮೇನಾಲ, ಪುರುಷೋತ್ತಮ ನಂಗಾರು, ತೇಜಪ್ರಕಾಶ್ ಬುಡ್ಲೆಗುತ್ತು, ಮೊದಲಾದವರು ಉಪಸ್ಥಿತರಿದ್ದರು.

Related posts