Header Ads
Breaking News

ಎ.26 ಮತ್ತು 27ರಂದು ಬಿಐಟಿಯಲ್ಲಿ ಅಂತರ್ ರಾಷ್ಟ್ರೀಯ ‘ಸರ್ಫ್-2019’ ಸಮ್ಮೇಳನ

ಬ್ಯಾರೀಸ್ ಗ್ರೂಪ್ ಸಂಸ್ಥಾಪಿತ ಬ್ಯಾರೀಸ್ ನಾಲೆಜ್ ಕ್ಯಾಂಪಸ್‍ನಲ್ಲಿ ‘ಸುಸ್ಥಿರ ನಗರಾಭಿವೃದ್ಧಿ ಸಂಪನ್ಮೂಲ ಸಂರಕ್ಷಣೆ ಮತ್ತು ಆಹಾರ ಭದ್ರತೆ’ ಎನ್ನುವ ವಿಷಯದ ಬಗ್ಗೆ ಎರಡು ದಿನಗಳ ಕಾಲ ಅಂತರ್ ರಾಷ್ಟ್ರೀಯ ಸಮ್ಮೇಳನ ‘ಸರ್ಫ್-2019’ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದೇವೆ ಎಂದು ಬ್ಯಾರೀಸ್ ಇನ್ಟಿಟ್ಯೂಟ್ ಆಫ್ ಟೆಕ್ನೋಲಜಿಯ ಪ್ರಚಾರ್ಯರಾದ ಡಾ.ಪಿ ಮಹಾಬಲೇಶ್ವರಪ್ಪ ಹೇಳಿದರು.

ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಇದೇ ಮೊದಲ ಬಾರಿಗೆ ನಾವು ‘ಸುಸ್ಥಿರ ನಗರಾಭಿವೃದ್ಧಿ ಸಂಪನ್ಮೂಲ ಸಂರಕ್ಷಣೆ ಮತ್ತು ಆಹಾರ ಭದ್ರತೆ’ ಎನ್ನುವ ವಿಷಯದ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನವನ್ನು ಎಪ್ರಿಲ್ 26 ಮತ್ತು 27ರಂದು ಎರಡು ದಿನಗಳ ಆಯೋಜಿಸಿದ್ದೇವೆ. ಎಪ್ರೀಲ್ 26ರಂದು ಬೆಳಿಗ್ಗೆ ಮೈಸೂರು ಸಿಎಫ್‍ಟಿಆರ್‍ಐನ ನಿರ್ದೇಶಕ ಅಲೋಕ್ ಕುಮಾರ್ ಶ್ರೀವಾತ್ಸವರವರ ನೇತೃತ್ವದಲ್ಲಿ ಆಹಾರ ಭದ್ರತೆ ಎನ್ನುವ ವಿಚಾರದ ಬಗ್ಗೆ ಸಂವಾದ ನಡೆಯಲಿದೆ. ಮಧ್ಯಾಹ್ನ ಮಲೇಷ್ಯಾದ ಖ್ಯಾತ ಸಂಶೋಧಕ ಡಾ.ಎಸ್.ಎ.ಖಾನ್‍ರವರ ನೇತೃತ್ವದಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಸುಧಾರಣೆಗಳು ಮತ್ತು ಇತ್ತೀಚಿನ ಪ್ರವೃತಿಗಳು ಎನ್ನುವ ವಿಚಾರದ ಬಗ್ಗೆ ಸಂವಾದ ನಡೆಯಲಿದೆ. ಎಪ್ರೀಲ್ 27ರಂದು ಭರತೀಯ ಚಿತ್ರ ನಿರ್ದೇಶಕ ಮತ್ತು ಸಂಪನ್ಮೂಲ ಸಂರಕ್ಷಣೆ ತಜ್ಞ ಮನ್ಸೂರ್ ಖಾನ್ ನೇತೃತ್ವದಲ್ಲಿ ಸಂಪನ್ಮೂಲ ರಕ್ಷಣೆ ಎನ್ನುವ ವಿಚಾರದ ಬಗ್ಗೆ ಸಂವಾದ ನಡೆಯಲಿದೆ ಮತ್ತು ಮದ್ಯಾಹ್ನ ಮಲೇಷ್ಯಾದ ವಾಸ್ತುಶಿಲ್ಪ, ಪರಿಸರವಾದಿ, ಲೇಖಕ ಡಾ.ಕೆನ್ ಯಾಂಗ್ ನೇತೃತ್ವದಲ್ಲಿ ಸುಸ್ಥಿರ ನಗರಾಭಿವೃದ್ಧಿ ಎನ್ನುವ ವಿಚಾರದಲ್ಲಿ ಸಂವಾದ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಸರ್ಫ್-2019ನ ಸಂಚಾಲಕರಾದ ಡಾ.ಮುಸ್ತಪಾ ಬಸ್ತಿಕೋಡಿ, ಬೀಡ್ಸ್ ಪ್ರಚಾರ್ಯರಾದ ಡಾ.ಅಸೋಕ್ ಎಲ್‍ಪಿ ಮೆಂಡೋನ್ಸಾ, ಬ್ಯಾರೀಸ್ ಇನ್ಟಿಟ್ಯೂಟ್ ಆಫ್ ಟೆಕ್ನೋಲಜಿಯ ಇಸಿಇ ವಿಭಾಗದ ಮುಖ್ಯಸ್ಥರಾದ ಡಾ.ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *