Header Ads
Header Ads
Breaking News

ಏಕ ಕಾಲದಲ್ಲಿ 90 ಮಂದಿ ಕಲಾವಿದರ ವೀಣಾವಾದನ

 ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಅಪೂರ್ವವಾದ ಸಂಗೀತ ಲೋಕವೊಂದು ಸೃಷ್ಟಿಯಾಗಿ ನೆರೆದವರನ್ನು ಮನಸೋರೆಗೊಂಡಿತು. ಕರಾವಳಿಯಲ್ಲಿ ಪ್ರಥಮ ಎಂಬಂತೆ ೯೦ ಕಲಾವಿದರು ಏಕ ಕಾಲದಲ್ಲಿ ವೀಣೆಯನ್ನು ನುಡಿಸಿ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಪರ್ಯಾಯ ಶ್ರೀ ಪಲಿಮಾರು ಮಠ ಉಡುಪಿ ಶ್ರೀ ಕೃಷ್ಣಮಠ ಆಶ್ರಯದಲ್ಲಿ ಮಣಿಪಾಲದ ಡಾ. ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರಾಜಾಂಗಣದಲ್ಲಿ ಕಲಾ ಸ್ಪಂದನ 23ನೇ ವಾರ್ಷಿಕೋತ್ಸವದ ಸಂದರ್ಬದಲ್ಲಿ ವೀಣಾ ವೃಂದ ಕಾರ್ಯಕ್ರಮ ನಡೆಯಿತು. ೧೧ವರ್ಷದ ಬಾಲಕ-ಬಾಲಕಿಯರಿಂದ ಹಿಡಿದು 68 ವರ್ಷದ ಹಿರಿಯ ವೀಣಾ ವಾದಕಿಯರ ವರೆಗೆ ವಿವಿಧ ವಯೋಮಾನದ ವೀಣಾ ಸಾಧಕರು ಸಂಗೀತ ಸುಧೆ ಹರಿಸಿದರು.

13ಮಂದಿ ಪುರುಷರು,77 ಮಂದಿ ಮಹಿಳೆಯರು ಪಾಲ್ಗೊಮ್ಡಿದ್ದರು. ವೀಣಾ ವಿದ್ಯಾರ್ಥಿಗಳ ಜೊತೆ ವಿಣಾ ವಿದ್ವತ್ ಪಡೆದವರ ಸಮಾಗಮವೂ ನಡೆಯಿತು. ವೈದ್ಯರು. ಇಂಜಿನಿಯರ್ ಗಳೂ ಇದ್ದರು.ವಿಪಂಚಿ ಬಳಗದ ಪವನ ಮತ್ತು ವೀಣಾ ವೃಂದದ ನೇತೃತ್ವ ವಹಿಸಿದ್ದರು. ಪರ್ಯಾಯ ಶ್ರೀ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು ಪರ್ಯಾಯ ಅವಧಿಯಲ್ಲಿ ಕೃಷ್ಣನಿಗೆ ನಿತ್ಯ ಲಕ್ಷ ತುಳಸಿ ಅರ್ಚನೆ ಮಾಡುತ್ತಿದ್ದಾರೆ. ತುಳಸಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದೇ ಹಿನ್ನಲೆಯಲ್ಲಿ ವೀಣಾವೃಂದ ಕಾರ್ಯಕ್ರಮದಲ್ಲಿ90ಮಂದಿಯೂ ಹಸಿರು ಬಟ್ಟೆ ತೊಟ್ಟು ತುಳಸಿದಳಗಳಾಗಿ ಒಂದುವರೆ ಗಂಟೆಕಾಲ ನಾದ ಹೊಮ್ಮಿಸಿ ನೆರೆದವರನ್ನು ಮನರಂಜಿಸಿದರು. ಇದಕ್ಕೂ ಮೊದಲು ಕಾರ್ಯಕ್ರಮವನ್ನು ಪರ್ಯಾಯ ಶ್ರೀಗಳು ಉದ್ಘಾಟಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

Related posts

Leave a Reply