Header Ads
Header Ads
Header Ads
Header Ads
Header Ads
Header Ads
Breaking News

ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾದಿಂದ ಸಾಮೂಹಿಕ ಸಮುದ್ರ ಪೂಜೆ

ಪ್ತತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಸಮುದ್ರ ಪೂಜೆಯ ಮಂಗಳೂರಿನ ತಣ್ಣಿರು ಬಾವಿ ಕಡಲ ಕಿನಾರೆಯಲ್ಲಿ ನೆರವೇರಿಸಲಾಯಿತು. ಮಂಗಳೂರು ಏಳು ಪಟ್ಣ ಮೊಗವೀರ ಸಂಯುಕ್ತ ಮಹಾಸಭಾದ ವತಿಯಿಂದ ಸಾಮೂಹಿಕ ಸಮುದ್ರ ಪೂಜಾ ಕಾರ್ಯಕ್ರಮವು ಕಡಲ ಕಿನಾರೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ದ ವತಿಯಿಂದ ಪರಂಪರೆಯಂತೆ ಸಮುದ್ರ ಪೂಜೆ ನೆರವೇರಿಸಲಾಯಿತು. ಬೋಳೂರು, ಬೊಕ್ಕಪಟ್ಣ, ಕುದ್ರೋಳಿ, ಹೊಯಿಗೆ ಬಜಾರ್, ಬೋಳಾರ, ಜಪ್ಪು, ನೀರೇಶ್ವಾಲ್ಯ, ಪಡು ಹೊಯಿಗೆ, ಮೊಗವೀರ ಪಟ್ಣ ಸಭೆಗಳ ಒಳಪಟ್ಟ ಮೋಗವೀರರು ಕದ್ರಿಯ ಸುವರ್ಣ ಕದಳೀ ಮಠಾಧೀಶ ಶ್ರೀ ರಾಜಯೋಗಿ ನಿರ್ಮಲಾನಾಥಜೀ ಮಹಾರಾಜ್ ಅವರ ನೇತೃತ್ವದಲ್ಲಿ ಸಮುದ್ರ ಪೂಜೆ ನೆರವೇರಿಸಿದರು.

ಮೊಗವೀರರು ಆಚರಿಸುವ ಸಮುದ್ರ ಪೂಜೆ ಅತಿ ಪುರಾತನ ಸಂಪ್ರದಾಯ. ಮೊಗವೀರ ಸಮುದಾಯದವರು ಮೀನುಗಾರಿಕೆ ಆರಂಭಿಸಿದಂದಿನಿಂದ ನಡೆದು ಬಂದ ಸಂಪ್ರದಾಯ. ಮಳೆಗಾಲ ಆರಂಭವಾಗುತ್ತಿದ್ದಂತೆ ಕಡಲು ಪ್ರಕ್ಷುಬ್ಧ ವಾಗುತ್ತದೆ. ಕಡಲ ರೌದ್ರ ನರ್ತನ ಆರಂಭಗೊಳ್ಳುತ್ತಿದ್ದಂತೆ ಕಡಲ ಮಕ್ಕಳ ಮೀನುಗಾರಿಕೆ ರಜೆ ಆರಂಭವಾಗುತ್ತದೆ. ಹಿಂದೆ ೩ ತಿಂಗಳ ಮೀನುಗಾರಿಕೆ ರಜೆ ಇತ್ತು. ಆದರೆ ಈಗ ೪೫ ದಿನಗಳ ಮೀನುಗಾರಿಕಾ ರಜೆ ನೀಡಲಾಗಿದೆ. ಮೀನುಗಾರಿಕಾ ರಜೆ ಮುಗಿದ ಬಳಿಕ ಪ್ರಕ್ಷುಬ್ಧ ಗೊಂಡಿರುವ ಸಮುದ್ರ ರಾಜನನ್ನು ಶಾಂತಗೊಳಿಸಲು ಸಂಪ್ರದಾಯವೇ ಸಮುದ್ರ ಪೂಜೆ ಈ ಸಮುದ್ರ ಪೂಜೆಯಲ್ಲಿ ಎಲ್ಲಾ ಮೊಗವೀರ ಬಾಂಧವರು ಪಾಲ್ಗೊಳ್ಳುತ್ತಾರೆ.

ಇದೇ ವೇಳೆ ಕಾಂಚನಾ ಮೋಟಾರ್‍ಸ್‌ನ ಮಾಲಕರಾದ ಪ್ರಸಾದ್ ರಾಜ್ ಕಾಂಚನ್ ಅವರು ಮಾತನಾಡಿ, ಇವತ್ತು ಮೊಗವೀರ ಸಮುದಾಯದವರು ಸಮುದ್ರ ರಾಜನನ್ನು ನೆನಪಿಸಿಕೊಳ್ಳುವ ದಿನ. ಪ್ರಪಂಚದಲ್ಲಿ ಮುಂದಿರುವ ಸಮುದಾಯ ಎಂದರೆ ಅದು ಮೊಗವೀರ ಸಮುದಾಯ. ನಮ್ಮ ಪೂರ್ವಜರು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಬಂದಿರುವುದರಿಂದ ನಮ್ಮ ಸಮುದಾಯವರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ ಎಂದು ಹೇಳಿದರು.ಆನಂತರ ಗ್ರಾಮಸಭೆಯ ಗುರಿಕಾರರಾದ ದೇವಾನಂದ ಗುಜರನ್ ಅವರು ಸಮುದ್ರ ಪೂಜಾ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಈ ಸಂದರ್ಭ ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷರಾದ ದೇವದಾಸ್ ಬೋಳೂರು, ಲೋಕನಾಥ್ ಪುತ್ರನ್ ಪಡುಹೊಯಿಗೆ, ಅಧ್ಯಕ್ಷರಾದ ಸುಭಾಶ್‌ಚಂದ್ರ ಕಾಂಚನ್, ಶ್ಯಾಮಸುಂದರ ಕಾಂಚನ್, ಹೇಮಚಂದ್ರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಕಡಲ ಕಿನಾರೆಗೆ ಬರುವ ಸ್ವಾಮೀಜಿ ಹಾಗೂ ಮೊಗವೀರ ಬಾಂಧವರು ಸಮುದ್ರ ರಾಜನಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಕಡಲ ಒಡಲು ತಣಿಸಲು ಹಾಲು ಹಾಗೂ ಹಣ್ಣು ತೆಂಗಿನಕಾಯಿಯನ್ನು ಸಮರ್ಪಿಸುತ್ತಾರೆ. ಹಾಲು ಹಣ್ಣು ಹಂಪಲು ಅರ್ಪಣೆ ಸಮರ್ಪಿಸುವ ಮುನ್ನ ಶಾಂತವಾಗಿರುವ ಸಮುದ್ರ ರಾಜ ಕಡಲ ಮಕ್ಕಳು ಸಮರ್ಪಿಸಿದವುಗಳನ್ನು ಸ್ವೀಕರಿಸುತ್ತಾನೆ ಎಂಬ ನಂಬಿಕೆ ಇವತ್ತಿಗೂ ನಡೆದುಕೊಂಡು ಬಂದಿದೆ.

Related posts

Leave a Reply

Your email address will not be published. Required fields are marked *