Header Ads
Breaking News

ಐತಿಹಾಸಿಕ ಪಡುಬಿದ್ರಿ ಢಕ್ಕೆಬಲಿ : ಅಟೋ ರಿಕ್ಷಾ ಚಾಲಕ-ಮಾಲಕರಿಂದ ಹೊರೆ ಕಾಣಿಕೆ

ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಕ್ಕೋಮ್ಮೆ ನಡೆಯುವ ಢಕ್ಕೆಬಲಿ ಸೇವೆಯ ಸಂದರ್ಭ ಪಡುಬಿದ್ರಿ ಅಟೋ ಚಾಲಕ-ಮಾಲಕರು ಕೊಡ ಮಾಡುವ ಹೊರೆ ಕಾಣಿಕೆಯನ್ನು ಈ ದಿನ ಪೇಟೆಯ ಮುಖ್ಯ ಬಸ್ ತಂಗುದಾಣದ ಬಳಿ ಹಾಕಲಾದ ಶ್ಯಾಮೀಯಾನದಡಿ ಶೇಖರಿಸಿದ್ದು, ಈ ದಿನದ ಸೇವರ್ತಿಗಳ ಸಹಿತ ದೇವಸ್ಥಾನದ ಆಗಮಿಸಲಿರುವ ಹೊರೆ ಕಾಣಿಕೆಯೊಂದಿಗೆ ಸೇರಿ ಬ್ರಹ್ಮಸ್ಥಾನ ತಲುಪಲಿದೆ.
ಈ ಬಗ್ಗೆ ವಿ೪ ಗೆ ಮಾಹಿತಿ ನೀಡಿದ ಅಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಎರಡು ವರ್ಷಗಳಿಗೋಮ್ಮೆ ಸುಮಾರು ಎರಡು ತಿಂಗಳ ಕಾಲ ನಡೆಯುವ ಢಕ್ಕೆಬಲಿ ಸೇವೆಗೆ ಊರ ಪರವೂರ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಈ ಢಕ್ಕೆಬಲಿ ಸೇವೆಗೆ ಪ್ರಮುಖವಾಗಿ ಹೂ-ಹಿಂಗಾರ-ಸಿಯಾಳ ಪ್ರಮುಖವಾಗಿದ್ದು ಇದನ್ನೇ ಹೊರೆ ಕಾಣಿಕೆಯ ಸಂದರ್ಭ ಭಕ್ತಾಧಿಗಳು ತಲೆಯಲ್ಲಿ ಹೊತ್ತು ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಪೇಟೆ ಪ್ರದೇಶವಾಗಿ ಸರತಿಯ ಸಾಲಿನಲ್ಲಿ ಸಾಗಿ, ಯಾವುದೇ ಕಟ್ಟಡಗಳಿಲ್ಲದ ಮರಗಿಡಗಳ ತಂಪು ವಾತಾವರಣದಲ್ಲಿ ಪೂಜಿಸಲ್ಪಡುವ ಖಡ್ಗೇಶ್ವರಿ ಸನ್ನಿಧಿಗೆ ತಲುಪಿಸಲಾಗುತ್ತದೆ. ಈ ಪುಣ್ಯ ಕ್ಷೇತ್ರದಲ್ಲಿ ಯಾವುದೇ ವಿಧ್ಯುತ್ ದೀಪಗಳು ಕಾಣಿಕೆ ಡಬ್ಬಗಳಿಲ್ಲ, ಫೋಟೋ-ವಿಡಿಯೋಗಳನ್ನು ಕ್ಲಿಕಿಸುವ ಅವಕಾಶವೂ ಇಲ್ಲಿಲ್ಲ, ಪ್ರತೀ ಸಲದಂತೆ ಕಷ್ಟ ಸ್ಥಿತಿಯಲ್ಲಿ ಢಕ್ಕೆಬಲಿ ಸೇವೆ ನೀಡುವವರ ಸೇವೆಯ ಸಂದರ್ಭ ಎರ್ಮಾಳು-ಪಡುಬಿದ್ರಿ-ನಂದಿಕೂರು-ಹೆಜಮಾಡಿ ಪ್ರದೇಶದ ಅಟೋ ಚಾಲಕ ಮಾಲಕರಾದ ನಾವು ಈ ಹೊರೆ ಕಾಣಿಕೆಯನ್ನು ಸಲ್ಲಿಸುತ್ತೇವೆ ಎಂದರು.

ಈ ಹೊರೆಕಾಣಿಕೆಗೆ ಮುನ್ನ ಪಡುಬಿದ್ರಿ ದೇವಸ್ಥಾನದ ವಠಾರದಲ್ಲಿ ಸೇವಾಕರ್ತುಗಳು ನೀಡುವ ಸಾರ್ವಜನಿಕ ಅನ್ನ ಸಂತರ್ಪಣೆಗೆ ಊರ-ಪರವೂರ ಹತ್ತು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಪಾಲ್ಗೊಳ್ಳುತ್ತಿದ್ದು, ಈ ಅನ್ನ ಪ್ರಸಾದವನ್ನು ಒಮ್ಮೆಯಾದರೂ ಸೇವಿಸಿ ಧನ್ಯರಾಗುತ್ತೇವೆ ಎಂಬುದಾಗಿ, ಇತರರ ಸಹಾಯ ಪಡೆದು ವಯೋವೃದ್ಧರು ಸಹಿತ ಅನಾರೋಗ್ಯ ಹೊಂದಿದವರು ಕೂಡಾ ಅನ್ನ ಪ್ರಸಾದ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ.

Related posts

Leave a Reply

Your email address will not be published. Required fields are marked *